ಕೃತಜ್ಞತೆ ಸಲ್ಲಿಸಿದ ಮಂಥರ್ ಗೌಡ

24Kush02
ಕುಶಾಲನಗರ ಸಮಾನ ಮನಸ್ಕರರ ತಂಡದ ಪ್ರಮುಖ ಟಿ.ಆರ್.ಶರವಣಕುಮಾರ್ ನಿವಾಸದಲ್ಲಿ ಡಾ.ಮಂಥರ್ ಗೌಡ ಕೃತಜ್ಞತೆ ಸಲ್ಲಿಸಿದರು. ಕೆ.ಎಸ್.ಮಹೇಶ್, ವಿ.ಎಸ್.ಅನಂದಕುಮಾರ್, ವಿ.ಸಿ.ಅಮೃತ್, ಜೋಸೆಫ್ ವಿಕ್ಟರ್ ಸೊನ್ಸ್ ಇದ್ದರು.
Published on

ಕುಶಾಲನಗರ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಸಮಾನ ಮನಸ್ಕರರ ತಂಡ ಟಿ.ಆರ್.ಶರವಣಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರನ್ನು ಬೆಂಬಲಿಸಿದ್ದ ಕಾರಣ ಇತ್ತೀಚೆಗೆ ಶರವಣಕುಮಾರ್ ಅವರ ನಿವಾಸದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದರು. ಕ್ಷೇತ್ರದಲ್ಲಿ ಪಕ್ಷ ಬೇಧ ಮರೆತು ನನ್ನೊಂದಿಗೆ ಮತದಾರರು ನಿಂತರು. ಈ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿ ಮಾಡುವಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು. ಸಮಾನ ಮನಸ್ಕರರ ತಂಡದ ಪ್ರಮುಖರಾದ ಕೆ.ಎಸ್.ಮಹೇಶ್, ವಿ.ಎಸ್.ಅನಂದಕುಮಾರ್, ವಿ.ಸಿ.ಅಮೃತ್, ಜೋಸೆಫ್ ವಿಕ್ಟರ್ ಸೊನ್ಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net