

ಜಯತೀರ್ಥ ಪಾಟೀಲ ಕಲಬುರಗಿ
ಕರೊನಾ ಕಾರ್ಮೋಡಕ್ಕೆ ಕಲ್ಯಾಣ ನಾಡಿನ ತೊಗರಿ ಕಣಜ ಕಲಬುರಗಿಯಲ್ಲೇ ತೊಗರಿ ಬೇಳೆ ಕೃತಕ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಬೇಳೆ ದರದಲ್ಲಿ ಏರಿಕೆ ಕಂಡುಬಂದಿದ್ದು, ರೈತರು ಮತ್ತು ಬಡ, ಮಧ್ಯಮ ವರ್ಗದ ಗ್ರಾಹಕರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.
ಈ ಮೊದಲು 7500-7600 ರೂ. ಇದ್ದ ತೊಗರಿ ಬೇಳೆ ದರ 8000-8100 ರೂ.ಗೆ ಜಂಪ್ ಆಗಿದೆ. 4900 ರೂ. (ಪ್ರತಿ ಕ್ವಿಂಟಾಲ್) ಇದ್ದ ತೊಗರಿ ಧಾರಣೆ ಇದೀಗ 5400-5500 ರೂ.ಗೆ ಏರಿಕೆ ಕಂಡಿದೆ. ದಾಲ್ಮಿಲ್ಗಳಲ್ಲೂ ಸ್ಟಾಕ್ ಇಲ್ಲ. ಕೆಲವರು ಕಡಿಮೆ ದರದಲ್ಲಿ ಸ್ಟಾಕ್ ಮಾಡಿ ಕರೊನಾದಿಂದ ಉದ್ಭವಿಸಿದ ಸಂಕಷ್ಟ ಸ್ಥಿತಿ ನೋಡಿಕೊಂಡು ಹೆಚ್ಚಿನ ದರದಲ್ಲಿ ಮಾರುಕಟ್ಟೆಗೆ ಬಿಡುತ್ತಿರುವುದು ಈ ಕೃತಕ ಅಭಾವಕ್ಕೆ ಕಾರಣವಾಗಿದೆ.
50 ಲಕ್ಷ ಟನ್ ಉತ್ಪಾದನೆ
ಕಲ್ಯಾಣ ಕರ್ನಾಟಕದಲ್ಲಿ ಸರಿಸುಮಾರು 7 ಲಕ್ಷ ಟನ್ ತೊಗರಿ ಉತ್ಪಾದನೆ ಇದೆ. ದೇಶದಲ್ಲಿ ತೊಗರಿ ಬೇಳೆ ಬೇಡಿಕೆ 32 ಲಕ್ಷ ಟನ್ ಇದ್ದರೆ, ಉತ್ಪಾದನೆಯಾಗಿದ್ದು 50 ಲಕ್ಷ ಟನ್. ಕಲ್ಯಾಣ ಕನರ್ಾಟಕವೂ ಸೇರಿ ರಾಜ್ಯದಲ್ಲಿ ಸುಮಾರು 10 ಲಕ್ಷ ಟನ್ ತೊಗರಿ ಉತ್ಪಾದನೆ ಇದ್ದುದ್ದರಿಂದ ಮಾರುಕಟ್ಟೆಯಲ್ಲಿ ಅಭಾವ ಎಂಬ ಪ್ರಶ್ನೆಯೇ ಉದ್ಭವಿಸದು.
ಎಲ್ಲೆಡೆ ಪೂರೈಕೆ ಬಂದ್ ಆಗಿದ್ದು, ತೊಗರಿ ಲೋಡಿಂಗ್, ಅನ್ಲೋಡಿಂಗ್ ಸ್ಥಗಿತಗೊಂಡಿದೆ. ದಾಲ್ಮಿಲ್ಗಳಲ್ಲೂ ಸ್ಟಾಕ್ ಇಲ್ಲ, ಇದ್ದರೂ ಸರಬರಾಜು ಆಗುವುದು ದುಸ್ತರವಾಗಿದೆ. ಇಂತಹ ಸ್ಥಿತಿಯ ದುರ್ಲಭ ಮಾಡಿಕೊಳ್ಳುವ ಕೆಲವರು ಸ್ಟಾಕ್ ಮಾಡಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಕಷ್ಟದಲ್ಲಿ ಕಾರ್ಮಿಕರು
ದಾಲ್ಮಿಲ್ ಸೇರಿ ತೊಗರಿ ವಹಿವಾಟಿನಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 40-50 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡು ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ. ರಾಜ್ಯದ ಇತರ ಮೂಲೆಗಳಿಂದ ಅಪ್ಪಿ-ತಪ್ಪಿ ಲೋಡ್ ಮಾಡಿಕೊಂಡು ಹೋಗಲು ಬರುವ ಲಾರಿ ಚಾಲಕರು, ಕ್ಲೀನರ್ಗಳು ಸೇರಿ ನೂರಾರು ಜನರಿಗೆ ಊಟವೂ ಸಿಗುತ್ತಿಲ್ಲ. ಖಾನಾವಳಿ, ಹೋಟೆಲ್ಗಳೆಲ್ಲ ಸಂಪೂರ್ಣ ಬಂದ್ ಆಗಿವೆ. ಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸ್ಟಾಕ್ ಹೊರಹೋಗುವುದು ಬಹುತೇಕ ಸ್ಥಗಿತಗೊಳ್ಳಲಿದೆ. ಪರಿಸ್ಥಿತಿ ಕೈಮೀರಿ ಹೋದಲ್ಲಿ ಕಾಳಸಂತೆ ದಂಧೆ ಶುರುವಾಗುವ ಆತಂಕವೂ ಇದೆ.
ಕರೊನಾ ಎಫೆಕ್ಟ್ನಿಂದಾಗಿ ತೊಗರಿ ಮಾಕರ್ೆಟ್ ಸಂದಿಗ್ಧ ಸ್ಥಿತಿಗೆ ತಲುಪಿದೆ. ಈ ಉದ್ಯಮದಲ್ಲಿ ತೊಡಗಿರುವ ಕಾಮರ್ಿಕರು ಕೆಲಸ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದಲ್ಲಿ ಮಾತ್ರ ಸುಧಾರಣೆ ಕಾಣಬಹುದಾಗಿದೆ. ರಾಜ್ಯ ಸಕರ್ಾರವೂ ಇದರ ಮೇಲೆ ನಿಗಾ ವಹಿಸಿದೆ.
| ಶಿವಶರಣಪ್ಪ ನಿಗ್ಗುಡಗಿ
ಅಧ್ಯಕ್ಷ, ಗುಲ್ಬರ್ಗ ದಾಲ್ಮಿಲ್ಲರ್ಸ್ ಅಸೋಸಿಯೇಷನ್