

ಚಿತ್ರದುರ್ಗ : ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆ ಗ್ರಾಪಂ ವ್ಯಾಪ್ತಿಯ ಮುತ್ತಿಗಾರಹಳ್ಳಿ ಹಾಗೂ ಮಾರಮ್ಮನಹಳ್ಳಿ ಗೋಶಾಲೆಗಳ ಕಾರ್ಮಿಕರಿಗೆ ಕಳೆದ ಐದು ತಿಂಗಳಿಂದ ಕೂಲಿ ನೀಡದೆ ಸತಾಯಿಸುತ್ತಿರುವುದನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಮಂಗ ಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ 21ಹಾಗೂ ಮಾರಮ್ಮನಹಳ್ಳಿಯಲ್ಲಿ 15 ದಿನಗೂಲಿಗಳು ಕೆಲಸದಲ್ಲಿದ್ದು,ಈವರೆಗೂ ನಯಾಪೈಸೆ ಕೂಲಿ ನೀಡಿಲ್ಲ. ಈ ತಿಂಗಳ ಅಂತ್ಯದೊಳಗೆ ಕೂಲಿ ಹಣ ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾ ಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಸಿ.ವೈ.ಶಿವರುದ್ರಪ್ಪ, ಸಹ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‌ಬಾಬು, ಮೊಳಕಾಲ್ಮೂರು ತಾಲೂಕು ಕಾರ್ಯದರ್ಶಿ ಕಾಂ.ಜಾಫರ್ ಷರೀಫ್, ಡಿ.ಬಸವರಾಜಪ್ಪ, ಸತ್ಯಕೀರ್ತಿ ಮತ್ತಿತರರು ಇದ್ದರು.