

ಬೆಟ್ಟದಪುರ: ಬೆಟ್ಟದಪುರ ಸಮೀಪದ ಕೂರಗಲ್ಲು ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಗಾಯತ್ರಮ್ಮ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಗಾಯತ್ರಮ್ಮ, ಪಾರ್ವತಿ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ಗಿರೀಶ್ ಅವಿರೋಧವಾಗಿ ಆಯ್ಕೆ ಘೋಷಿಸಿದರು.
ನಿರ್ದೇಶಕರಾದ ಲಕ್ಷ್ಮಮ್ಮ, ಮಂಜುಳಾ, ಸುಂದರಮ್ಮ, ಕವಿತಾ, ಕಮಲಮ್ಮ, ಪದ್ಮ, ಆಶಾ, ಅನಸೂಯಾ, ಜ್ಯೋತಿ, ಕಾರ್ಯದರ್ಶಿ ರೇಖಾ, ಮುಖಂಡರಾದ ಶಿವಕುಮಾರ್, ಚಂದ್ರು, ಕೃಷ್ಣ, ಜವರೇಗೌಡ, ಅಣ್ಣೇಗೌಡ, ರಾಜು, ರಮೇಶ್, ಸುರೇಶ್, ಪರಮೇಶ್, ಮಂಜು, ಶಂಕರ್ ಇತರರು ಇದ್ದರು.