ಕೂಡಿಗೆಯಲ್ಲಿ ರೈತರಿಗೆ ತೆಂಗಿನ ಗಿಡ ವಿತರಣೆ

ಕೂಡಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆದಿರುವ ತೆಂಗಿನ ಸಸಿ.
28Kush02
Published on

ಕುಶಾಲನಗರ: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ತೋಟಗಾರಿಕಾ ಇಲಾಖೆಯ ವತಿಯಿಂದ ಆವರ್ತನಿಧಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ವತಿಯಿಂದ 2022-23 ಸಾಲಿನಲ್ಲಿ ಬೆಳೆಸಲಾಗಿರುವ ತೆಂಗಿನ ಗಿಡಗಳನ್ನು ರೈತರಿಗೆ ವಿತರಿಸುವ ಕಾರ್ಯ ಇತ್ತೀಚೆಗೆ ಆರಂಭಿಸಲಾಯಿತು.


ಒಂದು ತೆಂಗಿನ ಗಿಡಕ್ಕೆ 75 ರೂ. ದರದಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ದಾಖಲೆ ಮತ್ತು ಗುರುತಿನ ಚೀಟಿಯನ್ನು ಪಡೆದು ವಿತರಣೆ ಮಾಡಲಾಗುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆನಂದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net