ಕೂಡಿಗೆ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

29mdk03
Published on

ಕುಶಾಲನಗರ: ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿದ ಶಾಲೆಯ ಕ್ರೀಡಾಪಟುಗಳಾದ ಚಪ್ಪುಡಿರ ನಾಚಪ್ಪ, ಪ್ರತೀಕ್ ಯರಕಲ್, ಖುಷಿ, ಅರ್ಚನಾ ಅವರು ದೀಪ ಬೆಳಗಿ ಖ್ಯಾತ ಕ್ರೀಡಾ ಸಾಧಕ ಧ್ಯಾನ್‌ಚಂದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕ್ರೀಡಾ ದಿನಕ್ಕೆ ಚಾಲನೆ ನೀಡಿದರು.

ದಿನದ ಮಹತ್ವದ ಬಗ್ಗೆ ಮಾತನಾಡಿದ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ್, ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಮತ್ತು ಕೌಶಲ ಪ್ರದರ್ಶಿಸುವುದು ಒಂದು ಕಲೆ. ಅದನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು ಎಂದರು. ಮುಖ್ಯೋಪಾಧ್ಯಾಯ ಮುರಳಿ ಮಾತಾನಾಡಿ, ಕ್ರೀಡಾ ಪಟುಗಳು, ಹಿರಿಯ ಸಾಧಕರ ಮಾರ್ಗ ದರ್ಶನದಲ್ಲಿ ಸಾಗಿ ತಮ್ಮ ಪ್ರತಿಭೆಯ ಮುಖೇನ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು

ಈನಿಟ್ಟಿನಲ್ಲಿ ಇಂದೇ ಪಣತೊಡಬೇಕು ಎಂದರು

ಕ್ರೀಡಾ ತರಬೇತುದಾರರಾದ ಸುರೇಶ್, ದಿನಮಣಿ, ಆಶ್ವಿತಾ, ಶಿಕ್ಷಕರಾದ ರಂಜಿನಿ, ಗೀತಾ, ಆಶಾ, ಸವಿತಾ, ಮೋಹನ್ ಹಾಗೂ ವಿದ್ಯಾರ್ಥಿಗಳು ಇದ್ದರು.ಕ್ರೀಡಾ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಕಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರ ನೇತೃತ್ವವನ್ನು ಪ್ರಥಮ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳಾದ ನಿಹಾಲ್ ಸಂತೋಷ್, ಮೋಕ್ಷಿತ್ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net