ಕೂಡಲೇ ಆನವಟ್ಟಿಯಿಂದ ಸಮನವಳ್ಳಿಗೆ ಪಶು ಆಸ್ಪತ್ರೆ ಸ್ಥಳಾಂತರಿಸಿ: ಕುಮಾರ್ ಬಂಗಾರಪ್ಪ

SOR WEB
Published on

ಸೊರಬ: ಆನವಟ್ಟಿಯಲ್ಲಿ ಇರುವ ಪಶುವೈದ್ಯ ಆಸ್ಪತ್ರೆಯನ್ನು ಬೇರಡೆ ಸ್ಥಳಾಂತರ ಮಾಡಬಾರದು ಎಂದು ನೀಡಿರುವ ಅರ್ಜಿಗಳನ್ನು ವಜಾ ಮಾಡಿ, ಕೂಡಲೇ ಸಮನವಳ್ಳಿ ಗ್ರಾಮಕ್ಕೆ ಆಸ್ಪತ್ರೆಯನ್ನು ಸ್ಥಳಾಂತರಿಸುವಂತೆ ಶಾಸಕ ಎಸ್.ಕುಮಾರ ಬಂಗಾರಪ್ಪ ತಹಸೀಲ್ದಾರ್ ಶೋಭಾಲಕ್ಷ್ಮೀ ಅವರಿಗೆ ಸೂಚಿಸಿದರು.

ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಆನವಟ್ಟಿಯಲ್ಲಿ ಇರುವ ಪಶುವೈದ್ಯ ಆಸ್ಪತ್ರೆಯಲ್ಲಿ ಜನ, ಜಾನುವಾರಗಳು ನಿಲ್ಲಲು ಸರಿಯದ ಜಾಗವಿಲ್ಲ. ಬೆರೇಡೆಗೆ ಸ್ಥಳಾಂತರ ಮಾಡಬೇಡಿ ಎಂದು ಅರ್ಜಿ ನೀಡಿದವರ‌್ಯಾರೂ ದನ-ಕರುಗಳನ್ನು ಕಟ್ಟಿ ಹಾಲು ಕರೆದು ಡೇರಿಗೆ ಹಾಕುವವರಲ್ಲ. ಅವರಲ್ಲ ಪ್ಯಾಕೆಟ್ ಹಾಲು ಕುಡಿಯುವವರು. ಜಾನುವಾರುಗಳ ಬಗ್ಗೆ ಅವರಿಗೇನು ಗೊತ್ತು ಎಂದು ಹರಿಹಾಯ್ದ ಶಾಸಕರು, ತಕ್ಷಣವೇ ಆಸ್ಪತ್ರೆ ಸ್ಥಳಾಂತರ ಮಾಡಬೇಕೆಂದು ತಹಸೀಲ್ದಾರ್‌ಗೆ ತಾಕೀತು ಮಾಡಿದರು.

ತಾಪಂ ಸಂಯೋಜನಾಧಿಕಾರಿ ಶ್ರೀರಾಮ, ಬಿಇಒ ಮನೋಹರ್, ಸಣ್ಣ ನೀರಾವರಿ ಇಂಜಿನಿಯರ್ ರಾಮಪ್ಪ, ಎಪಿಎಂಸಿ ಕಾರ್ಯದರ್ಶಿ ಎಚ್.ಆಶಾ, ಆರ್‌ಎಫ್‌ಒ ಪ್ರಭುರಾಜ್ ಪಾಟೀಲ್, ವಿನೋದ್, ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net