ಕೂಡಲ ಸಂಗಮದಲ್ಲಿ 12ರಿಂದ 38ನೇ ಶರಣ ಮೇಳ

CTD SHARANAMELA
Published on

ಚಿತ್ರದುರ್ಗ: ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ಸುಕ್ಷೇತ್ರದಲ್ಲಿ 2025ರ ಜನವರಿ 12ರಿಂದ 3 ದಿನಗಳ ಕಾಲ 38ನೇ ಶರಣಮೇಳ ಆಯೋಜಿ ಸಲಾಗಿದೆ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಕಾರ್ಯಾಧ್ಯಕ್ಷರಾದ ಜಗದ್ಗುರು ಗಂಗಾದೇವಿ ಮಾತಾಜಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಾತಿ,ಮತ,ಪಂಥಗಳ ಬೇಧವಿಲ್ಲದೆ ಎಲ್ಲರೂ ಒಂದೇ ಎಂಬ ಸಮಭಾವನೆಯನ್ನು ಹೊಂದಿರುವ ಎಲ್ಲ ಶರಣರು,ಬಸವ ಭಕ್ತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀ ಲಿ.ಲಿಂಗಾನಂದಾ ಸ್ವಾಮೀಜಿ ಹಾಗೂ ಲಿಂ.ಮಾತೆ ಮಹಾದೇವಿ ಅವರ ಸಂಕಲ್ಪದ ಈ 1988ರಿಂದ ಈವರೆಗೆ 37 ಸಂವತ್ಸರಗಳನ್ನು ಪೂರೈಸಿದೆ. 12ರಂದು ಚಿಂತನಾ ಗೋಷ್ಠಿ,ಮಹಿಳಾ ಗೋಷ್ಠಿ ನಡೆಯಲಿದೆ. 13ರಂದು ಮೇಳದ ಉದ್ಘಾಟನೆ,ಸಂಜೆ ಪೀಠೋಹರಣ ಸ ಮಾರಂಭ, 14ರಂದು ಧ್ವಜಾ ರೋಹಣ,ಸಮುದಾಯ ಪ್ರಾರ್ಥನೆ,108ವಚನಗಳ ಪಾರಾಯಣ.ಪಥಸಂಚಲನ, ಇಷ್ಟಲಿಂಗ ಪೂಜೆ ಆಯೋಜಿಸಲಾಗಿದೆ.

ಮೇಳದಲ್ಲಿ ನಾಡಿನ ನಾನಾ ಮಠಾಧೀಶರು,ಸಾಹಿತಿ,ರಾಜಕೀಯ ಧುರೀಣರು ಸೇರಿದಂತೆ ನಾನಾ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಧ ರ್ಮಗುರು ಬಸವಣ್ಣನವರ ಭಾವಚಿತ್ರದೊಂದಿಗೆ ವಚನ ಸಾಹಿತ್ಯದ ಮೆರವಣಿಗೆ, ಸೇರಿದಂತೆ ವಿವಿಧ ಹತ್ತು ಹಲವು ಕಾರ‌್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

ಚಿತ್ರದುರ್ಗ ಬಸವ ಮಂಟಪದ ಪೀಠಾಧ್ಯಕ್ಷೆ ದಾನೇಶ್ವರಿ ಮಾತಾಜಿ,ಬೆಂಗಳೂರು ಕುಂಬಳಗೋಡು ಬಸವಗಂಗೋತ್ರಿ ಆಶ್ರಮದ ಪೀ ಠಾಧ್ಯಕ್ಷ ಸದ್ಗುರು ಬಸವಯೋಗಿ ಸ್ವಾಮೀಜಿ,ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿ ಪ್ರಧಾನ ಕಾರ‌್ಯದರ್ಶಿ ಚಂದ್ರಮೌಳಿ,ರಾಜ್ಯಾಧ್ಯಕ್ಷ ವೀರೇಶ್‌ಕುಮಾರ್,ವಿನೋದಮ್ಮ ಮತ್ತಿತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net