

ವಿಜಯಪುರ : ಕೂಡಗಿ ಎನ್ ಟಿಪಿಸಿಯ ವಿದ್ಯುತ್ ಸ್ಥಾವರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕಾರ್ಮಿಕನೋರ್ವ ಸುಮಾರು 500 ಅಡಿ ಎತ್ತರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಉತ್ತರ ಪ್ರದೇಶ ರಾಜ್ಯದ ಘಾಜಿಪುರ ಜಿಲ್ಲೆಯ ಉಕ್ರಾವ್ ಗ್ರಾಮದ ಕಿಸನ್ ಭಾರದ್ವಾಜ್ (31) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದುರ್ದೈವಿ.
ಕಾರ್ಮಿಕನ ಸಾವಿಗೆ ತೀವ್ರ ಆಕ್ರೋಶಗೊಂಡ ಕಾರ್ಮಿಕರು ಬುಧವಾರ ಬೆಳಗಾಗುತ್ತಿದ್ದಂತೆಯೇ ಎನ್ ಟಿಪಿಸಿ ಪ್ರವೇಶ ದ್ವಾರದ ಎದುರು ಉತ್ತರ ಪ್ರದೇಶ ಮೂಲದ ಕಾರ್ಮಿಕರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕೂಡಗಿ ಎನ್ ಟಿಪಿಸಿ ಠಾಣಾ ಪಿಎಸ್ ಐ ಯತೀಶ ಕೆ.ಎನ್, ಮತ್ತವರ ಸಿಬ್ಬಂದಿ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.