

ಚಾಮರಾಜನಗರ: ರಂಜಾನ್ ಹಬ್ಬದ ಪ್ರಯುಕ್ತ ನಗರದ ಮರ್ಸಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಇ್ತಾರ್ ಕೂಟದಲ್ಲಿ ಅಧಿಕಾರಿಗಳು ಪಾಲ್ಗೊಂಡರು.
ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಮತ್ತು ಇತರರು ಪಾಲ್ಗೊಂಡರು.
ಇದೇ ವೇಳೆ ಡಿಸಿ ಶಿಲ್ಪಾನಾಗ್ ಮಾತನಾಡಿ, ರಂಜಾನ್ ತಿಂಗಳಲ್ಲಿ ಉಪವಾಸವಿದ್ದು, ಇ್ತಾರ್ ಕೂಟದಲ್ಲಿ ಇತರೆ ಸಮುದಾಯದವರಿಗೂ ಅಹ್ವಾನ ನೀಡಿ ವಿವಿಧತೆಯಲ್ಲಿ ಏಕತೆ ಸಾರಲಾಗಿದೆ.
ಇದೇ ರೀತಿ ದೇಶದಲ್ಲಿ ಎಲ್ಲ ಧರ್ಮದವರು ಒಗ್ಗೂಡಿ ಭಾವೈಕ್ಯತೆಯಿಂದ ಪರಸ್ಪರವಾಗಿ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸಿದರೆ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ವೈದ್ಯಾಧಿಕಾರಿ ಡಾ.ಮಹೇಶ್, ಮುಸ್ಲಿಂ ಧರ್ಮದ ಗುರುಗಳಾದ ಖಾರಿ ಕಾಮಿಲ್ ನಯೀಮ್ ಉಲ್ ಹಕ್, ಮಹಮ್ಮದ್ ರಫೀಕ್ ಸಿದ್ದೀಕಿ, ಡಾ.ಬಸವರಾಜೇಂದ್ರ, ವಕೀಲರಾದ ರಾಜೇಂದ್ರ, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಮರ್ಸಿ ಪಬ್ಲಿಕ್ ಶಾಲೆ ಅಧ್ಯಕ್ಷ ಮುಜಾಯಿದ್ ಅಹ್ಮದ್, ಕಾರ್ಯದರ್ಶಿ ಸಿದ್ದಿಕ್ ಅಹಮದ್, ಸದಸ್ಯರಾದ ಇದ್ರೇಸ್‌ಖಾನ್, ಸ್ಕೇಟಿಂಗ್ ತರಬೇತಿದಾರ ಮುಸಾವೀರ್ ಪಾಷ, ಟಿಪ್ಪು ಅಸೋಸಿಯೇಷನ್ ಅಧ್ಯಕ್ಷ ಜಾವಿದ್, ಅನ್ಸರ್‌ಖಾನ್, ಮುಖ್ಯ ಶಿಕ್ಷಕ ಚಂದ್ರಶೇಖರ ಹಾಗೂ ಇದ್ದರು.