

ಸಂಬರಗಿ: ಸಮೀಪದ ಶಿರೂರ ಗ್ರಾಮದ ಮಹಾಲಕ್ಷೀ ದೇವಿ ಜಾತ್ರೆ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಸಾಂಗಲಿ ಪೈಲ್ವಾನ್ ಬಾಳು ಕಾಂಬಳೆ ವಿರುದ್ಧ ಕೊಳಗಿರಿ ಗ್ರಾಮದ ವಿಜಯ ಕೊಳೇಕರ ಗೆದ್ದು ಪ್ರಥಮ ಬಹುಮಾನ ಪಡೆದರು. ಸಾಂಗಲಿಯ ಸುಮಿತ ಕಾಂಬಳೆ, ವಿಶ್ವಜಿತ್ ಬನಸೋಡೆ, ಮಿರಜದ ಅದಿತ್ಯಾ ಮೊರೆ, ಅಬ್ಬಿಹಾಳದ ಸುಮಿತ ಬಡಿಗೇರ, ಸಲಗರದ ಹರ್ಷವರ್ಧನ ಖೋತ ಸೇರಿ ಅನೇಕ ಪೈಲ್ವಾನರು ಭಾಗಿಯಾಗಿದ್ದರು. ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಸದಸ್ಯರಾದ ರಘುನಾಥ ಹಜಾರೆ, ಬೀರು ಹಜಾರೆ, ಕಾಕಾ ಪಾಟೀಲ, ಎಸ್.ಎಲ್. ಪಾಟೀಲ, ಬಾಹುಸಾಹೇಬ ಕೊಳೇಕರ, ದಾದಾಸಾಹೇಬ ಜಾಂಬರೆ ಇತರರು ಇದ್ದರು.