ಕುಸ್ತಿ ಮೈದಾನ ನಿರ್ಮಾಣಕ್ಕೆ ೫ ಲಕ್ಷ ರೂ.

8MGKD1
Published on

ಮುಗಳಖೋಡ: ಸುಸಜ್ಜಿತ ಕುಸ್ತಿ ಮೈದಾನ ನಿರ್ಮಿಸಲು ೫ ಲಕ್ಷ ರೂ. ನೀಡಲಾಗುವುದು ಎಂದು ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಭರವಸೆ ನೀಡಿದರು.

ಪಟ್ಟಣದ ಶ್ರೀಯಲ್ಲಾಲಿಂಗ ಪ್ರಭು ಮಹಾರಾಜರ ಬೃಹನ್ಮಮಠದಲ್ಲಿ ಲಚ್ಯಾನ ಕೈವಲ್ಯಧಾಮ ಶ್ರೀಸಿದ್ಧಲಿಂಗೇಶ್ವರ ಪ್ರಭು ಮಹಾರಾಜರ ಜಾತ್ರಾ ಮಹೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದ ಸಿಖಂದರ ಪ್ರಥಮ, ಇರಾನ್ ದೇಶದ ಮಲನ ಪೈ ದ್ವಿತೀಯ, ಶಾವು ಪುರಿ ಕೊಲ್ಲಾಪುರದ ರಾಘು ತೋಮರೆ ತೃತೀಯ ಪಡೆದುಕೊಂಡರು. ಹರಿಯಾನದ ಅಮಿತಕುಮಾರ, ಕರ್ನಾಟಕ ಕೇಸರಿ ನಾಗರಾಜ ಬಸಿಡೋಣಿ ನಡುವೆ ನಡೆದ ೩ನೇ ಕುಸ್ತಿ ಸಮವಾದರೆ, ನಾಲ್ಕನೇ ಕುಸ್ತಿಯಲ್ಲಿ ನೇಪಾಳದ ದೇವತಾಪ ವಿಜಯಶಾಲಿಯಾದರು. ೨೧ ಜೋಡಿಗಳಲ್ಲಿ ೧೫ ಕುಸ್ತಿ ಸಮಗೊಂಡವು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹೇಂದ್ರ ತಮ್ಮಣ್ಣವರ, ಮಾರುತಿ ಗೋಕಾಕ, ಕುಸ್ತಿ ಪಂದ್ಯಾವಳಿ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಪರಪ್ಪ ಖೇತಗೌಡರ, ಹಾಲಪ್ಪ ಶೇಗುಣಸಿ, ಚೇತನ ಯಡವಣ್ಣವರ, ರಾಜು ನಾಯಿಕ, ಮಹಾಂತೇಶ ಯರಡೆತ್ತಿ, ಶಿವಾನಂದ ಮೆಕ್ಕಳಕಿ, ಮುತ್ತಪ್ಪ ಬಾಳೋಜಿ, ಮಲ್ಲಪ್ಪ ಹುನ್ನೂರ, ಭೀಮಪ್ಪ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net