

ಕಕ್ಕೇರಿ: ಕುಸ್ತಿ ನಮ್ಮ ದೇಶದ ಸಂಸತಿಯ ಪ್ರತಿಕ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿಷ್ಠಾದೇವಿ ಮಂದಿರದ ಅಧ್ಯ ಕಾರ್ತಿಕ ಅಂಬೋಜಿ ಹೇಳಿದರು.
ಗ್ರಾಮದಲ್ಲಿ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆ ನಿಮಿತ್ತ ಮಂದಿರದ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಮಾಜಿ ಪೆಲ್ವಾನ್ ಅದಶ್ಯ ಮನತುರ್ಗಿ ಮಾತನಾಡಿದರು. ಮಂದಿರದ ಕಾರ್ಯದರ್ಶಿ ರಮೇಶ ಕೋಚೆರಿ ಮಾತನಾಡಿದರು. ತೀರ್ಪುಗಾರರಾಗಿ ಅದೃಶ್ಯ ಮನತುರ್ಗಿ, ಸಂತಾನ ಪುಟದಾದು, ಅಭಿಮನ್ಯು ಅಂಬೋಜಿ, ಸುರೇಶ ಮಂಗೂಮಾಳಿ, ವೀರೇಶ ಅಂಬೋಜಿ, ಮಂಜುನಾಥ ಗೋಳಿಹಳ್ಳಿ, ಹನುಮಂತ ಗೊರವ ಕಾರ್ಯನಿರ್ವಹಿಸಿದರು. ವಿಜೇತರರಿಗೆ ಜಾತ್ರಾ ಕಮಿಟಿ ವತಿಯಿಂದ ಹಣಕಾಸು, ಬೆಳ್ಳಿ, ಕಡಗ ನೀಡಿ ಪ್ರೋತ್ಸಾಹಿಸಿದರು. ಮುಖಂಡರಾದ ಚನ್ನವಿರಯ್ಯ ಹಿರೇಮಠ, ಮಾರುತಿ ರಾಪನವರ, ರಾಜು ಕೋರಿಶವಾಡ, ಈಶ್ವರ ಚವ್ವಣ್ಣವರ, ಲಕ್ಷ$್ಮಣ ಚನ್ನಾಪುರ, ಪರಶುರಾಮ ರ್ಬಿಜಿ, ನಾಮದೇವ ಕುಂಬಾರಕೊಪ್ಪ, ಸಂಗಪ್ಪ ಮಾಟೊಳ್ಳಿ ಇತರರಿದ್ದರು.