ಕುಸಿದು ಬಿದ್ದಿದ್ದ ವ್ಯಕ್ತಿ ಸಾವು

29srl1
Published on

ಶಿವಮೊಗ್ಗ: ಪೊಲೀಸರ ಲಾಠಿ ಏಟು ತಪ್ಪಿಸಿಕೊಳ್ಳುವ ಆತಂಕದಲ್ಲಿ ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ಚೆಕ್​ಪೋಸ್ಟ್ ಬಳಿ ಕುಸಿದು ಬಿದ್ದಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸುಣ್ಣದಕೊಪ್ಪ ಗ್ರಾಮದ ಲಕ್ಷ್ಮಣ ನಾಯ್ಕ್ (50) ಮೃತ ವ್ಯಕ್ತಿ.

ಲಾಕ್​ಡೌನ್ ಆದೇಶದ ನಡುವೆ ಜಮೀನಿಗೆ ನೀರು ಹಾಯಿಸಲು ಪುತ್ರನೊಂದಿಗೆ ಬೈಕ್​ನಲ್ಲಿ ತೆರಳಿದ್ದ ಅವರು ವಾಪಸ್ ಬರುವಾಗ ಸುಣ್ಣದಕೊಪ್ಪ ಚೆಕ್​ಪೋಸ್ಟ್​ನಲ್ಲಿದ್ದ ಪೊಲೀಸರು ಹೆದರಿಸಲು ಲಾಠಿ ಎತ್ತಿದ್ದರು. ಇದರಿಂದ ಪೆಟ್ಟು ಬೀಳುವ ಆತಂಕದಿಂದ ಲಕ್ಷ್ಮಣ ನಾಯ್್ಕ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಕೆ.ಎಂ.ಶಾಂತರಾಜು, ಎಎಸ್ಪಿ ಡಾ. ಎಚ್.ಟಿ.ಶೇಖರ್ ಭೇಟಿ ನೀಡಿ ಪರಿಶೀಲಿಸಿ ಮೃತನ ಕುಟುಂಬದೊಂದಿಗೆ ಮಾತುಕತೆ ನಡೆಸಿದರು. ಯಾವುದೇ ಲಾಠಿ ಚಾರ್ಜ್ ಆಗಿಲ್ಲ. ಲಕ್ಷ್ಮಣರಾವ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಎಸ್ಪಿ ಕೆ.ಎಂ.ಶಾಂತರಾಜು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net