ಕುಸಿದಿದ್ದ ಮನೆ ವೀಕ್ಷಿಸಿದ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್

ಕುಸಿದಿದ್ದ ಮನೆ ವೀಕ್ಷಿಸಿದ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್
Published on

ಅರಸೀಕೆರೆ : ಮಳೆ ಹಾನಿ ಭರಿಸಲು ರಾಜ್ಯ ಸರ್ಕಾರ ಬದ್ಧವಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು. ತಾಲೂಕಿನ ಕ್ಯಾತನಹಳ್ಳಿ ತಾಂಡ್ಯ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಕುಸಿದಿದ್ದ ಮನೆ ವೀಕ್ಷಿಸಿ ಮಾತನಾಡಿದರು.

ಭಗವಂತನ ಕೃಪೆಯಿಂದ ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು ಕೆರೆ,ಕಟ್ಟೆಗಳು ತುಂಬಿ ತುಳುಕುತ್ತಿವೆ. ಆದರೆ ಬೆಳೆನಾಶ, ಮನೆ ಹಾನಿಯಂತಹ ಅವಘಡಗಳು ನಡೆದಿರುವುದು ಬೇಸರ ತರಿಸಿದೆ.ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 17 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದರೆ 254 ಮನೆಗಳು ಭಾಗಶಃ ಹಾನಿಯಯಾಗಿವೆ.ಮೊದಲ ಹಂತದಲ್ಲಿ ಈಗಾಗಲೇ 1.20 ಕೋಟಿ ರೂ.ಪರಿಹಾರ ನೀಡಲಾಗಿದ್ದು ಇನ್ನುಳಿದ ಅನುದಾನ ಶೀಘ್ರಮನೆ ಮಾಲೀಕರ ಕೈಸೇರಲಿದೆ.ಕೃಷಿ, ತೋಟಗಾರಿಕಾ ಬೆಳೆಗಳ ನಾಶದಿಂದ ಸಾಕಷ್ಟು ನಷ್ಟ ಸಂಭವಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪ್ರಾಮಾಣಿಕವಾಗಿ ಪರಿಹಾರ ನೀಡಲಿದೆ ಎಂದು ಅನ್ನದಾತರಿಗೆ ಭರವಸೆ ನೀಡಿದರು.

ನರಸೀಪುರ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎನ್.ರವೀಂದ್ರನಾಥ್,ಉಪಾಧ್ಯಕ್ಷ ಗೊಲ್ಲರಹಳ್ಳಿ ರಮೇಶ್,ಮುಖಂಡರಾದ ರಾಂಪುರ ಶೇಖರಪ್ಪ,ಕ್ಯಾತಹಳ್ಳಿ ಅಶೋಕ್,ನರೇಂದ್ರ, ಡೈರಿ ಪ್ರಕಾಶ್,ಕೊಟ್ರೇಶ್ ನಾಯ್ಕ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net