ಕುಸಿದ ಸೇತುವೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

13M.D.R.1
ಮದ್ದೂರು ಹಾಗೂ ಬೆಸಗರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಮ್ಮಣ್ಣುನಾಲೆಯ ಸೇತುವೆ ಮಣ್ಣು ಕುಸಿದು ಅಪಾಯಕ್ಕೆ ಆಹ್ವಾನಿಸುತ್ತಿದ್ದು, ಕೂಡಲೇ ದುರಸ್ತಿಪಡಿಸುವಂತೆ ಒತ್ತಾಯಿಸಿ ದೇಶಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದರು
Published on

ಮದ್ದೂರು: ಮದ್ದೂರು ಹಾಗೂ ಬೆಸಗರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಮ್ಮಣ್ಣುನಾಲೆಯ ಸೇತುವೆ ಮಣ್ಣು ಕುಸಿದು ಅಪಾಯಕ್ಕೆ ಆಹ್ವಾನಿಸುತ್ತಿದ್ದು, ಕೂಡಲೇ ದುರಸ್ತಿಪಡಿಸುವಂತೆ ಒತ್ತಾಯಿಸಿ ದೇಶಹಳ್ಳಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟಿಸಿದರು.

ಪ್ರಗತಿಪರರ ಜತೆಗೂಡಿ ಸೇತುವೆಯ ಮಣ್ಣು ಕುಸಿದಿರುವ ಪ್ರದೇಶದಲ್ಲಿ ಜಮಾಯಿಸಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಮದ್ದೂರಮ್ಮನ ಕೆರೆ ಬಳಿ ಹೋಗುವ ಕೆಮ್ಮಣ್ಣು ನಾಲೆ ರಸ್ತೆಯಲ್ಲಿ ಸೇತುವೆಯ ಮಣ್ಣು ಕುಸಿದಿದ್ದು, ಸುಮಾರು ಆಳುದ್ದ ಗುಂಡಿ ಬಿದ್ದಿದೆ, ವಾಹನ ಮತ್ತು ಸಾರ್ವಜನಿಕರು ಸಂಚರಿಸುವಾಗ ಅಪಾಯ ಆಹ್ವಾನಿಸುತ್ತಿದೆ. ರಾತ್ರಿ ವೇಳೆ ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ, ಆದರೂ ಅಧಿಕಾರಿಗಳು ದುರಸ್ತಿಗೆ ಮುಂದಾಗದೆ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ತೆಂಗು ಬೆಳೆಗಾರ ಸಂಘದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ಈ ರಸ್ತೆಯಲ್ಲಿ ಏಷ್ಯಾದಲ್ಲಿ ಮೊದಲ ಎಳನೀರು ಮಾರುಕಟ್ಟೆ ಎಂದು ಹೆಸರು ಪಡೆದಿರುವ ಎಳನೀರು ಮಾರುಕಟ್ಟೆಗೆ ಪ್ರತಿನಿತ್ಯ ವಾಹನಗಳು ಸಂಚರಿಸುತ್ತವೆ. ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ವಾಹನ, ಕಬ್ಬು ತುಂಬಿದ ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಸೇತುವೆ ಕುಸಿದು ಬಿದ್ದು ಹಲವಾರು ದಿನಗಳು ಕಳೆದರೂ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಕೂಡಲೇ ಸೇತುವೆ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ನೀರಾವರಿ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಗೌತಮ್, ರಾಜೇಶ್, ಕುಮಾರ್, ಬಸವರಾಜು, ಅಭಿಷೇಕ್, ನಾರಾಯಣ್, ಸತೀಶ್, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net