ಕುಸಿದ ಚಿಕನಾಗಾಂವ ತಾಂಡಾ ಶಾಲೆ ಗೋಡೆ

Capture
Published on

ಬಸವಕಲ್ಯಾಣ: ಚಿಕನಾಗಾಂವ ತಾಂಡಾ (ರಾಮನಗರ ತಾಂಡಾ)ದಲ್ಲಿ ಭಾನುವಾರ ಬೆಳಗ್ಗೆ ಸಕರ್ಾರಿ ಶಾಲೆ ಕೋಣೆ ಗೋಡೆ ಕುಸಿದಿದೆ. ರಜಾ ದಿನವಾಗಿದ್ದರಿಂದ ಶಿಕ್ಷಕರು-ಮಕ್ಕಳು ಇರಲಿಲ್ಲ. ಹೀಗಾಗಿ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.

ತಾಂಡಾ ಹೊರವಲಯದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, ಎರಡು ಕೋಣೆಗಳಿವೆ. ಒಂದು ಕೆಲ ವರ್ಷಗಳ ಹಿಂದೆ ನಿಮರ್ಿಸಿದ್ದು, ಏಳು ವರ್ಷ ಹಿಂದೆ ನಿಮರ್ಾಣಗೊಂಡಿದ್ದ ಇನ್ನೊಂದು ಕೋಣೆ ಗೋಡೆ ಕುಸಿದಿದೆ.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಶರಣು ಸಲಗರ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ತಕ್ಷಣ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಲ್ಲದೆ ಕುಸಿದ ಕೋಣೆೆ ತಕ್ಷಣ ತೆರವುಗೊಳಿಸುವಂತೆ ತಿಳಿಸಿದ್ದಾರೆ. ಜತೆಗೆ ಎರಡು ಹೊಸ ಕೋಣೆ ನಿಮರ್ಾಣಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ.

ಜೆಡಿ ಭೇಟಿ: ಶಾಲೆ ಕೋಣೆ ಕುಸಿದಿರುವ ಹಿನ್ನೆಲೆಯಲ್ಲಿ ಇಲಾಖೆ ಕಲಬುರಗಿ ಆಯುಕ್ತರ ಕಚೇರಿ ಜಂಟಿ ನಿದರ್ೇಶಕ ಜಿ.ಎಂ. ವಿಜಯಕುಮಾರ, ಬಿಇಒ ಸಿ.ಜಿ. ಹಳ್ಳದ, ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ ಸ್ಥಳಕ್ಕೆ ಭೇಡಿ ನೀಡಿ ಪರಿಶೀಲಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಲಾಗಿದೆ. ಮಕ್ಕಳ ಅಭ್ಯಾಸಕ್ಕೆ ತೊಂದರೆ ಆಗದಂತೆ ತಾಂಡಾದ ಸಂತ ಸೇವಾಲಾಲ್ ಮಂದಿರದಲ್ಲಿ ಪಾಠ-ಬೋಧನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಬಿಇಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net