ಕುಶಾಲನಗರದಲ್ಲಿ ಮಹಿಳಾ ಮೋರ್ಚಾದಿಂದ ಪ್ರಚಾರ

04Kush02
Published on

ಕುಶಾಲನಗರ: ಕುಶಾಲನಗರ ಪುರಸಭೆ ವ್ಯಾಪ್ತಿಯ ಬೂತ್ ನಂ.159ರಲ್ಲಿ ಸೋಮವಾರಪೇಟೆ ಮಂಡಲದ ಮಹಿಳಾ ಮೋರ್ಚಾದಿಂದ ಬುಧವಾರ ಮನೆ ಮನೆ ಪ್ರಚಾರ ನಡೆಸಲಾಯಿತು.


ಮಹಿಳೆಯರನ್ನು ಭೇಟಿ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ನೀಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಮತ ನೀಡಿ ಅವರನ್ನು ಗೆಲ್ಲಿಸಿ ಮಂತ್ರಿ ಮಾಡುವ ಮೂಲಕ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕರಿಸುವಂತೆ ಕೋರಿದರು.


ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೇದಾವತಿ, ಸಾಮಾಜಿಕ ಜಾಲತಾಣದ ಭಾನುಮತಿ, ಇಂದಿರಾ ಮೊನ್ನಪ್ಪ, ಪ್ರಮುಖರಾದ ಸೌಮ್ಯಾ, ಪೂರ್ಣಿಮಾ, ರಜನಿ, ಸೌಮ್ಯಾ ಭರತ್, ಗಂಗಮ್ಮ, ಆಶಾ, ಪುಷ್ಪಾವತಿ, ಮಿಥುನ, ಸಂಧ್ಯಾ, ಮಾನ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net