ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಸೇರಿಸಿ

13Kush01
ಕುಶಾಲನಗರ ಸಮೀಪದ ಮುಳ್ಳುಸೋಗೆ ಪಂಚಾಯಿತಿಯನ್ನು ಕುಶಾಲನಗರ ಪುರಸಭೆಗೆ ಸೇರಿಸಲು ಒತ್ತಾಯಿಸಿ ಆಯೋಜಿಸಿದ್ದ ಸಭೆಯಲ್ಲಿ ಕೆĮಪಿĮಚಂದ್ರಕಲಾĬ ಶಿವಾನಂದĬ ರಮೇಶ್Ĭ ಕೃಷ್ಣĬ ವಿĮಜೆĮನವೀನ್ ಇದ್ದರುĮ
Published on

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದಾದರೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನೂ ಅದರ ವ್ಯಾಪ್ತಿಗೆ ಸೇರಿಸಬೇಕೆಂದು ಮುಳ್ಳುಸೋಗೆ ಗ್ರಾಮಸ್ಥರು ಆಗ್ರಹಿಸಿದರುĮ


ಗುಮ್ಮನಕೊಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿĬ ಕುಶಾಲನಗರ ಪಟ್ಟಣ ಪಂಚಾ ಯಿತಿ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸೇರಿಸಿ ಪುರಸಭೆ ಮಾಡುವುದಕ್ಕೆ ಸಂಬಂಧಿಸಿದ ಸರ್ಕಾರ ಆದೇಶ ಹೊರಡಿಸಿತ್ತುĮ ಆದರೆ ಹೀಗೆ ಮಾಡುವುದರಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಕ್ಷಣ ಅಧಿಕಾರ ಕಳೆದುಕೊಳ್ಳುತ್ತದೆಂಬ ಆತಂಕದಿಂದ ಕೆಲವು ಗ್ರಾಪಂ ಸದಸ್ಯರು ಉಚ್ಚ ನ್ಯಾಯಾಲಯದಿಂದ ಆದೇಶಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರುĮ


ಈಗ ಮುಳ್ಳುಸೋಗೆ ಪಂಚಾಯಿತಿಯನ್ನು ಬಿಟ್ಟು ಗುಡ್ಡೆಹೊಸೂರು ಪಂಚಾಯಿತಿಯ ಕೆಲವು ವಾರ್ಡ್‌ಗಳನ್ನು ಸೇರಿಸಿಕೊಂಡು ಕುಶಾಲನಗರ ಪುರಸಭೆ ರಚನೆಗೆ ಪ್ರಯತ್ನ ನಡೆಯುತ್ತಿರುವುದಾಗಿ ತಿಳಿದುಬಂದಿದೆ ಎಂದು ಗ್ರಾಮಸ್ಥರು ಹೇಳಿದರುĮ


ಗ್ರಾಮದ ಕಾಂಗ್ರೆಸ್ ಮುಖಂಡ ವಿĮಜೆĮನವೀನ್Ĭ ಕೆĮಪಿĮಚಂದ್ರಕಲಾ ಮಾತನಾಡಿĬ ಸರ್ಕಾರದ ಹಿಂದಿನ ಆದೇಶವನ್ನು ಜಾರಿ ಗೊಳಿಸಲು ಮುಳ್ಳುಸೋಗೆ ಗ್ರಾಪಂ ಸದಸ್ಯರು ತುರ್ತುಸಭೆ ಸೇರಿ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರುĮ


ij ದಿನ ಕಾಲಾವಕಾಶ ನೀಡೋಣĮ ಅಷ್ಟರಲ್ಲಿ ಸದಸ್ಯರು ಸಭೆ ನಡೆಸಿ ನಮ್ಮ ತೀರ್ಮಾನದಂತೆ ಕ್ರಮ ಕೈಗೊಳ್ಳದಿದ್ದರೆ ಗ್ರಾಮದ ಪ್ರತಿ ಮನೆಗೂ ಜಾಗೃತಿ ಪತ್ರಗಳನ್ನು ವಿತರಿಸಿĬ ಗ್ರಾಮಸ್ಥರ ಸಹಕಾರದಿಂದ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ ದರುĮ


ಸದಸ್ಯರಾದ ಶಿವಾನಂದĬ ಪದ್ಮಾĬ ಮಾಜಿ ಸದಸ್ಯ ರಮೇಶ್Ĭ ಎಂĮಕೃಷ್ಣĬ ಎಂĮಎಸ್Į ರಾಜೇಶ್Ĭ ಹರೀಶ್ ಮತ್ತು ಗ್ರಾಮದ ಪ್ರಮುಖರು ಹಾಜರಿದ್ದರುĮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net