

ಕುಶಾಲನಗರ: ತಾಲೂಕು ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಕಡತಗಳನ್ನು ಅನವಶ್ಯಕವಾಗಿ ಇಟ್ಟುಕೊಳ್ಳಬಾರದು. ಕೆಲಸಕ್ಕೆ ವೇಗ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಮತ್ತು ತಾಲೂಕು ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದರು.
ತಾಲೂಕು ಕಚೇರಿ ಸಮೀಪದಲ್ಲಿ ಇರುವ ಭೂಮಿ ಕೇಂದ್ರಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿದ್ದ ಸಾರ್ವಜನಿಕರಿಂದ ಸೇವಾ ಕೇಂದ್ರದ ಬಗ್ಗೆ ಅಭಿಪ್ರಾಯ ಕೇಳಿದಾಗ, ಸರ್ವರ್ ಸಮಸ್ಯೆ ಬಗ್ಗೆ ದೂರು ಹೇಳಿದರು.
ಗುಂಡೂರಾವ್ ಬಡಾವಣೆಯಲ್ಲಿ ಕುಶಾಲನಗರ ತಾಲೂಕು ಆಡಳಿತ ಭವನಕ್ಕಾಗಿ ಮಿಸಲಿರುವ ಜಾಗವನ್ನು ಪರಿಶೀಲಿಸಿದ ಡಿಸಿ ವೆಂಕಟ್ ರಾಜಾ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.