ಕುವೆಂಪು ಶಾಲೆಯ ಬಾಲಕಿ-ಬಾಲಕರ ತಂಡ ಪ್ರಥಮ

Shuttle Badminton
ಸೋಮವಾರಪೇಟೆ ಸಮೀಪ ಕುವೆಂಪು ಶಾಲೆಯಲ್ಲಿ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಫೈನಲ್ ಹಣಾಹಣಿ.
Published on

ಸೋಮವಾರಪೇಟೆ: ಚೌಡ್ಲು ಗ್ರಾಮದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕುವೆಂಪು ಶಾಲೆಯ ಬಾಲಕಿ ಮತ್ತು ಬಾಲಕರ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು.

ಸಾಂಧೀಪನಿ ಶಾಲೆ ಬಾಲಕಿ ಮತ್ತು ಬಾಲಕರ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಜೇತ ತಂಡದಲ್ಲಿ ಹತ್ತನೇ ತರಗತಿಯ ಎಚ್.ಆರ್.ಜೀವಿತಾ, ಬಿಂದು, ಆದಿತ್ಯಾ ಮತ್ತು ರಂಜು, ರನ್ನರ್ಸ್‌ ತಂಡದಲ್ಲಿ ಡಿ.ಎಲ್.ತಾನ್ಯ, ರಿಶಾ, ಪ್ರತೀಕ್ ಮತ್ತು ಸ್ಮರಣ್ ಆಟವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net