ಕುವೆಂಪು ವಿವಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪ್ರತಿಭಟನೆ

24 ckm 9
ಚಿಕ್ಕಮಗಳೂರು ಎಸಿ ದಲ್ಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು ಕುವೆಂಪು ವಿಶ್ವವಿದ್ಯಾಲಯದ ಭ್ರಷ್ಟಾಚಾರ ಹಾಗೂ ಅಸಮರ್ಪಕ ಆಡಳಿತ ನಿರ್ವಹಣೆ ಕೊನೆಗಾಗಣಿಸಬೇಕು ಎಂದು ಒತ್ತಾಯಿಸಿದರು. ರಾಕೇಶ್, ಸಿದ್ಧಾರ್ಥ್, ರೋಶನ್, ಪ್ರೇಕ್ಷಿತ್, ನಂದನ್, ವೃಷಭ, ಹರೀಶ್, ಮನು, ಸೂರ್ಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದ ಭ್ರಷ್ಟಾಚಾರ ಹಾಗೂ ಅಸಮರ್ಪಕ ಆಡಳಿತ ನಿರ್ವಹಣೆ ಕೊನೆಗಾಗಣಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ನಗರದ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರ ಉz್ದೆÃಶಿಸಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ರಾಕೇಶ್, ಭ್ರಷ್ಟಾಚಾರದಲ್ಲಿ ತೊಡಗಿರುವ ಕುಲಸಚಿವರನ್ನು ಅಮಾನತ್ತು ಮಾಡಿ ಸರ್ಕಾರದ ಮಟ್ಟದಲ್ಲಿ ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಪಟ್ಟು ಹಿಡಿದರು.

ವಿಶ್ವವಿದ್ಯಾಲಯವು ಜ್ಞಾನ ಕೇಂದ್ರವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಗುವುದು ಕರ್ತವ್ಯ. ಆದರೆ ಭ್ರಷ್ಟ ಅಧಿಕಾರಿಗಳ ಕೈಗೆ ಸಿಲುಕಿಕೊಂಡು ಸಮರ್ಪಕ ಆಡಳಿತವಿಲ್ಲದೇ ನಲುಗುತ್ತಿರುವುದು ವಿಷಾಧನೀಯ. ಹೀಗಾಗಿ ಭ್ರಷ್ಟಾಚಾರ ಬೇರುಮಟ್ಟದಿಂದ ಕಿತ್ತುಹಾಕಿ ಸಮರ್ಪಕ ಆಡಳಿತಕ್ಕಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ವಿದ್ಯಾಲಯ ದೂರ ಶಿಕ್ಷಣ ವಿಭಾಗದಲ್ಲಿ ಪ್ರವೇಶಾತಿ ಹಾಗೂ ಇನ್ನಿತರ ನಿರ್ವಹಣೆಯನ್ನು ಎಲ್.ಎಂ. ಎಸ್. ಮುಖಾಂತರ ಬೆಂಗಳೂರು ಸಂಸ್ಥೆಯೊAದಿಗೆ ಭಾರೀ ವ್ಯಾಪಕ ಭ್ರಷ್ಟಾಚಾರದ ಕೂಗು ಕೇಳಿಬಂದರು ನಿರ್ಲಕ್ಷಿಸಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವಂತೆ ಒಪ್ಪಂದ ಮಾಡಿಕೊಂಡು ಲಕ್ಷಾಂತರ ರೂ.ಗಳನ್ನು ನಷ್ಟ ಉಂಟು ಮಾಡುತ್ತಿದೆ ಎಂದು ತಿಳಿಸಿದರು.

ಅಂದಾಜು ಸುಮಾರು ೫೦ ಲಕ್ಷ ಹಣಕಾಸು ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ಕುಲ ಸಚಿವರ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ಅಂಕಪಟ್ಟಿ ಮುದ್ರಣ ಕುರಿತ ವಿಷಯದಲ್ಲಿ ಸರ್ಕಾರದ ನಿರ್ದೇಶನಗಳನ್ನು ಬದಿಗೊತ್ತಿದೆ. ಖಾಸಗೀಯವರಿಗೆ ಗುತ್ತಿಗೆ ನೀಡುವ ವಿಚಾರದಲ್ಲಿ ಕೂಡ ಕುಲಸಚಿವರು, ಕುಲಪತಿಗಳು ಹಾಗೂ ಪರೀಕ್ಷಾಂಗ ಸಚಿವರು ವಿರುದ್ಧವು ದೂರು ದಾಖಲಾಗಿದೆ ಎಂದರು.

ವಿದ್ಯಾಲಯದ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳಿಗೆ ನೈಜ ಅಂಕಪಟ್ಟಿ ನೀಡದಿರುವುದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿ ಮುಂದಿನ ಹಂತದ ಶಿಕ್ಷಣ, ಉದ್ಯೋಗಕ್ಕೆ ತೊಡಕಾಗಿದೆ. ಮೂಲಭೂತ ಸೌಕರ್ಯಗಳನ್ನು ವಿಶೇಷವಾಗಿ ಪ್ರಾಯೋಗಿಕ ಉಪಕರಣಗಳು ಲಭ್ಯತೆ ಸೇರಿದಂತೆ ಅಮುಲಾಗ್ರವಾಗಿ ಉತ್ತಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇವೇಳೆ ರಸ್ತೆತಡೆಯಿಂದ ಹನುಮಂತಪ್ಪ ವೃತ್ತದಿಂದ ಬಸ್‌ನಿಲ್ದಾಣದವರೆಗೂ ಟ್ರಾಫಿಕ್ ಉಂಟಾಗಿತ್ತು. ಪ್ರತಿಭಟನೆಯಲ್ಲಿ ಎಬಿವಿಪಿ ಸದಸ್ಯ ಜಿಲ್ಲಾ ಸಂಚಾಲಕ ಸಿದ್ಧಾರ್ಥ್, ಸಂಘಟಾ ಕಾರ್ಯದರ್ಶಿ, ಸದಸ್ಯರುಗಳಾದ ರೋಶನ್, ಪ್ರೇಕ್ಷಿತ್, ನಂದನ್, ವೃಷಭ, ಹರೀಶ್, ಮನು, ಸೂರ್ಯ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net