ಕುವೆಂಪು ವಿವಿ ಚಂದ್ರಪ್ಪ ಜನ ಸೇವೆ ಗುರುತಿಸಿ ಗೌರವಿಸಿದೆ,ಸಾಣೇಹಳ್ಳಿ ಶ್ರೀ

CTD 29 M CHANDRAPPA (3)--04
Published on

ಚಿತ್ರದುರ್ಗ: ಕ್ಷೇತ್ರಾಭಿವೃದ್ಧಿಯೊಂದಿಗೆ ಜನ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಕುವೆಂಪು ವಿಶ್ವ ವಿ ದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ ಎಂದು ಸಾಣೇಹಳ್ಳಿ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ ಹೇಳಿ ದರು.
ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿರುವ ಶಾಸಕರಿಗೆ,ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿ ಬ್ಬಂದಿ ನಗರದ ತರಾಸು ರಂಗಮಂ ದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಸಮಾರಂಭದ ಸಾನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬಡತನ ಎದುರಿಸಿ ಬೆಳೆದವರು ಉತ್ತಮ ಸಾಧನೆ ಮಾಡುತ್ತಾರೆ. ಆ ಸಾಲಿನಲ್ಲಿ ಚಂದ್ರಪ್ಪ ಇದ್ದಾರೆ. ವಿದ್ಯೆ,ಅಧಿಕಾರ,ಹಣ ಇದೆ ಎಂದು ಅಹಂಕಾರ ಪಡಬಾರದು. ಗೆಲುವು-ಸೋಲನ್ನು ಲೆಕ್ಕಿಸದೆ ಮಠಕ್ಕೆ ಬರುವಂಥ ಪದ್ಧತಿ ಅವರದ್ದು. ಕ್ಷೇತ್ರದ ಜನರ ಮೇಲಿನ ಕಾಳಜಿ, ಗು ರುಗಳ ಬಗ್ಗೆ ಅವರಲ್ಲಿರುವ ಗೌರವದ ಕಾರಣಕ್ಕೆ ಗೆಲುವು ಸಾಧಿಸುತ್ತಿದ್ದಾರೆ. ಘಟಾನುಟಿಗಳೇ ಸೋತಿದ್ದರೂ ಅವರು ಗೆದ್ದಿದ್ದಾರೆ. ಈ ಗೆ ಲುವು ಚಂದ್ರಪ್ಪರ ಜನಪ್ರಿಯತೆಗೆ ಸಾಕ್ಷಿ. ಮಂತ್ರಿಯಾಗುವುದು ಮುಖ್ಯವಲ್ಲ.ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ.
ಡಾಕ್ಟರೇಟ್ ಪದವಿ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ. ಹಣಕೊಟ್ಟು ಈ ಪದವಿ ಪಡೆಯುವ ಕಾಲ ಇದಾಗಿದೆ. ಡಾಕ್ಟ ರೇಟ್ ಎನ್ನುವುದು ಒಂದು ಗೌರವ. ಅದನ್ನು ಪಡೆಯಲು ಸಾಧನೆ ಮುಖ್ಯ. ಚಂದ್ರಪ್ಪರ ಸುದೀರ್ಘ 29 ವರ್ಷಗಳ ಜನ ಸೇವೆ ಗುರುತಿಸಿ ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಅವರನ್ನು ಗೌರವಿಸಿದೆ. ಇದು ಕೆಲಸ ಮಾಡುವವರಿಗೆ ಸ್ಫೂರ್ತಿ ತರಲಿದೆ ಎಂದರು.
ಪಾಲಕರನ್ನು ನಿರ್ಲಕ್ಷಿಸುವ ಮಕ್ಕಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಚಂದ್ರಪ್ಪ ಅವರ ಪುತ್ರ ರಘುಚಂದನ್,ಪಾಲಕರು,ಗುರುಗಳೆಡೆ ಶ್ರದ್ಧಾ ಭಕ್ತಿ,ಗೌರವವನ್ನು ಹೊಂದಿದ್ದಾರೆ. ಅವರಲ್ಲಿರುವ ಜನಪರ ಕಾಳಜಿ ಖುಷಿ ತಂದಿದೆ ಎಂದರು.
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ,ಅಹಂಕಾರ ಯಾರನ್ನು ಎತ್ತರಕ್ಕೆ ಬೆಳೆಸುವುದಿಲ್ಲ. ಚಂದ್ರಪ್ಪ ಅವ ರಲ್ಲಿ ವಿನಯತೆ ಇರುವುದರಿಂದ ಅವರನ್ನು ಪದವಿ ಹುಡುಕಿಕೊಂಡು ಬಂದಿದೆ. ಚಂದ್ರಪ್ಪ ಅವರ ಆಡಳಿತ ಅಚ್ಚುಕಟ್ಟಾಗಿದೆ. ಇನ್ನು ಅನೇಕ ಅತ್ಯುನ್ನತ ಪದವಿ,ಪುರಸ್ಕಾರಗಳು ಅವರಿಗೆ ಲಭಿಸಲಿ ಎಂದರು.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ,ಸೂರ್ಯ-ಚಂದ್ರರು ಇರುವತನಕ ಅಜರಾಮರವಾಗಿ ರುವಂಥ ಕೆಲಸಗಳನ್ನು ಚಂದ್ರಪ್ಪ ಮಾಡಿದ್ದಾರೆ. ಯಾವ ಗ್ರಾಮಕ್ಕೆ ಏನು ಬೇಕು. ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕೈಗೊಂಡರೆ ಒಳ್ಳೆಯ ದಾಗುತ್ತದೆ ತಿಳಿದು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜನರ ನಾಡಿಮಿಡಿತ ಬಲ್ಲವರಿಂದ ಈ ಸಾಧನೆ ಸಾಧ್ಯ. ಡಾಕ್ಟರ್ ಗಳಿಗೆ ವ್ಯಕ್ತಿಯ ನಾಡಿಮಿಡಿತ ಗೊತ್ತಾದರೆ ಚಂದ್ರಪ್ಪ ಕ್ಷೇತ್ರದ ಜನರ ನಾಡಿಮಿಡಿತ ತಿಳಿದಿದ್ದರಿಂದಾಗಿ ಗೌರವ ಡಾಕ್ಟರೇಟ್ ಪ್ರದಾನವಾಗಿದೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಚಂದ್ರಪ್ಪ ಮಾತು ಸಾಧನೆಯಾಗಬಾರದು. ಸಾಧನೆ ಮಾತಾಗಬೇಕೆಂಬ ಸಿರಿಗೆರೆ ಹಾಗೂ ಸಾಣೇಹಳ್ಳಿ ಶ್ರೀಗಳು ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಕಾರಣಕ್ಕಾಗಿ ಜನ ಮತ್ತೆ ನನ್ನನ್ನು ಗೆಲ್ಲಿಸಿದ್ದಾರೆ. ರಾಜಕಾರಣಿಗೆ ಎತ್ತರಕ್ಕೆ ಹೋಗುವ ಅವಕಾಶವಿದೆ. ನಾನು ಕೂಡ ರಾಜಕಾರಣದಲ್ಲಿ ಉತ್ತುಂಗಕ್ಕೆ ಏರಿದ್ದರೂ ಅಂತಿಮವಾಗಿ ಸಾರ್ವಜನಿಕರ ಬಳಿ ಬರಲೇಬೇಕು. ಪೂಜ್ಯರ ಮಾತಗಳಿಂದ ಪ್ರೇರೇಪಿತನಾಗಿ ಜನ ಸೇವೆ ಮಾಡುತ್ತಿದ್ದೇನೆ. ಮಾಜಿ ಸಚಿವರಾದ ಮಸಿಯ ಪ್ಪ ಹಾಗೂ ಎಚ್.ಏಕಾಂತಯ್ಯ ಅವರು ರಾಜಕಾರಣದಲ್ಲಿ ನನ್ನನ್ನು ಬೆಳೆಸಿದ್ದಾರೆ.
ಕಪ್ಪು ಚುಕ್ಕೆ ಇಲ್ಲದಂತೆ ಕಳಂಕರಹಿತವಾಗಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ಸಿಕ್ಕ ಅವಕಾಶವನ್ನು ಸಾರ್ವಜನಿಕರಿಗೆ ಧಾರೆ ಎರೆಯಬೇಕು. ದೇವರಾಜ ಅರಸು ಶಿಕ್ಷಣ ಸಂಸ್ಥೆ ಸ್ಥಾಪನೆಗೆ ನನ್ನ ಧರ್ಮಪತ್ನಿ ಕಾರಣ. ಯಾವುದೇ ಫಲಾಪೇಕ್ಷೆಯಿಲ್ಲದೆ ಜನ ಸೇವೆ ಮಾ ಡಿಕೊಂಡು ಬರುತ್ತಿರುವುದರಿಂದ ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿದೆ. ಸಂಸ್ಥೆ ಸಿಬ್ಬಂದಿಯನ್ನು ಕುಟುಂಬದ ಸದಸ್ಯರೆಂದು ಭಾ ವಿಸಿದ್ದೇನೆ. ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ನೌಕರರ ಪರಿಶ್ರಮವಿದೆ ಎಂದರು.
ದೇವರಾಜು ಅರಸು ಶಿಕ್ಷಣ ಸಂಸ್ಥೆ ಸಿಇಒ ರಘುಚಂದನ್ ಮಾತನಾಡಿ,ತಂದೆ,ತಾಯಿ ನನಗೆ ಗುರುಗಳು. ಅವರು ತೋರಿಸಿದ ಹಾ ದಿಯಲ್ಲಿ ನಡೆಯುತ್ತಿದ್ದೇನೆ. ಜನತಾಬಜಾರ್ ನೌಕರರಾಗಿದ್ದವರು ಇಂದು ಸಾವಿರಾರು ಜನರಿಗೆ ಅನ್ನದಾತರಾಗಿದ್ದಾರೆ. ಚಿಕ್ಕವಯಸ್ಸಿ ನಲ್ಲೇ ಅಪಾರ ಸಾಧನೆ ಮಾಡಿದ್ದಾರೆ. ಅವರ ಮಗನಾಗಿದ್ದಕ್ಕೆ ಹೆಮ್ಮೆ ಇದೆ. ನಾನು ಕೂಡ ಅವರಂತೆ ಸಾಧಿಸಬೇಕಿದೆ. ಅವರ ಸಂಸ್ಕಾರ ನನ್ನಲ್ಲಿದೆ. ಅವರ ಹೆಸರು ಉಳಿಸುವ ಕೆಲಸ ಮಾಡುತ್ತೇನೆ ಎಂದರು.
ಮಾಜಿ ಸಚಿವ ವೆಂಕಟರಮಣಪ್ಪ,ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ,ಸಂಸ್ಥೆ ನಿವೃತ್ತ ಪ್ರಾಂಶುಪಾಲ ರುದ್ರಮುನಿ ಮತ್ತಿತ ರರು ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ಯಶಸ್ವಿನಿಕಿರಣ್,ನಿರ್ದೇಶಕ ಶ್ರೀನಿವಾಸ್,ಐ.ಜಿ.ಚಂದ್ರಶೇಖರಯ್ಯ,ಕೃಷ್ಣರಾಜಭಟ್ ಮತ್ತಿತರರು ಇದ್ದರು. ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು.
(ಸಿಟಿಡಿ 29 ಎಂ.ಚಂದ್ರಪ್ಪ)
ಚಿತ್ರದುರ್ಗದ ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿಬ್ಬಂದಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶಾಸಕ ಚಂದ್ರಪ್ಪ ಅವರಿಗೆ ಮ ಂಗಳವಾರ ಏರ್ಪಡಿಸಿದ್ದ ಗೌರವ ಸಮರ್ಪಣೆ ಸಮಾರಂಭವನ್ನು ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಿವಲಿಂಗಾನಂದ ಶ್ರೀಗಳು,ಶ್ರೀ ಇಮ್ಮಡಿ ಸಿದ್ದರಾಮ ಶ್ರೀಗಳು,ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಚಂದ್ರಕಲಾ,ನಿರ್ದೇಶಕ ಶ್ರೀನಿವಾಸ್, ಕೃಷ್ಣರಾಜಭಟ್, ಪದ್ಮಾವತಿ ಪಾಲಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net