ಕುವೆಂಪು ಮನೆ ಅಂಗಳದಿಂದ ಮೃತ್ತಿಕೆ ಸಂಗ್ರಹ

7
Published on

ಮೈಸೂರು: ದಿಲ್ಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೈನಿಕ ಉದ್ಯಾನದಲ್ಲಿ ನಿರ್ಮಾಣವಾಗುವ ಸ್ಮಾರಕ್ಕಾಗಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದ ಅಂಗವಾಗಿ ನಗರದ ರಾಷ್ಟ್ರಕವಿ ಕುವೆಂಪು ಅವರ ಮನೆ ಅಂಗಳದಿಂದ ಬುಧವಾರ ಮಣ್ಣನ್ನು ಸಂಗ್ರಹಿಸಲಾಯಿತು.
ಬಿಜೆಪಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಣಿ ವಿಲಾಸ (ವಿವಿ) ಮೊಹಲ್ಲಾದಲ್ಲಿರುವ ‘ಉದಯ ರವಿ’ ನಿವಾಸದಲ್ಲಿ ಪೂಜೆ ಸಲ್ಲಿಸಿ ಮಣ್ಣನ್ನು ತಂಬಿಗೆಯಲ್ಲಿ ಶೇಖರಿಸಲಾಯಿತು.
ಕುವೆಂಪು ಅವರ ಪುತ್ರಿ ತಾರಣಿ, ಅಳಿಯ ಡಾ.ಚಿದಾನಂದಗೌಡ ಅವರು ಪೂಜೆ ನೆರವೇರಿಸಿದರು. ಸೈನಿಕರ ಉದ್ಯಾನದಲ್ಲಿ ವೀರಮರಣವನ್ನಪ್ಪಿದವರ ನೆನಪಿಗಾಗಿ ನಿರ್ಮಿಸಲಿರುವ ಸ್ಮಾರಕಕ್ಕಾಗಿ ನಡೆಯುತ್ತಿರುವ ಈ ಅಭಿಯಾನ, ನಿಜಕ್ಕೂ ಅಭಿಮಾನದ ಕಾರ್ಯ ಎಂದು ಅವರು ಶುಭ ಹಾರೈಸಿದರು.
ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮೈಸೂರು ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್, ಪಕ್ಷದ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್‌ರಾಜು, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ವಾಣೀಶ್ ಕುಮಾರ್, ನಗರಪಾಲಿಕೆ ಸದಸ್ಯರಾದ ವೇದಾವತಿ, ಪ್ರಮೀಳಾ ಭರತ್, ಸತೀಶ್, ರವೀಂದ್ರ, ನನ್ನ ಮಣ್ಣು ನನ್ನ ದೇಶ ಅಭಿಯಾನದ ಕ್ಷೇತ್ರದ ಸಂಚಾಲಕ ಸಚಿನ್, ಮುಖಂಡರಾದ ದಿನೇಶ್‌ಗೌಡ, ಪುನೀತ್, ಭೋ.ಉಮೇಶ್, ಮಹೇಶ್‌ರಾಜೇ ಅರಸು, ಜಯಣ್ಣ, ಶಿವಪ್ರಕಾಶ್, ಚಾಮರಾಜ ಮೊಹಲ್ಲಾ ಲಕ್ಷ್ಮೀ, ಚರಣ್, ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net