

ಮೈಸೂರು: ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪದಲ್ಲಿ ಪೊಲೀಸ್ ಪೇದೆ ಆರ್. ಮಹೇಶಕುಮಾರ್ ಹಾಗೂ ಟಿ.ಜೆ.ಮಹಾಲಕ್ಷ್ಮಿ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದರು.
ನಗರದ ಗೋಕುಲಂ 3ನೇ ಹಂತದ ಕಾಂಟೂರ್ ರಸ್ತೆಯಲ್ಲಿರುವ ಶಾಗಲೆ ಹೌಸಿನಲ್ಲಿ ಶುಕ್ರವಾರ ಮಾನವ ಮಂಟಪದ ಸದಸ್ಯರಾದ ಡಾ.ಕೆ. ಕಾಳಚನ್ನೇಗೌಡ ಅವರು ಮದುವೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾನವ ಮಂಟಪದ ಸಂಚಾಲಕ ಧನಂಜಯ್ ಎಲಿಯೂರು, ಲ. ಜಗನ್ನಾಥ್, ಪರಿಸರ ಬಳಗದ ಪರಶುರಾಮೇಗೌಡ, ಡಾ.ವೆಂ.ವನಜಾ, ರಂಗಕರ್ಮಿ ಮೈಮ್ ರಮೇಶ್ ಮಾತನಾಡಿದರು.ಪ್ರ್ರೊ.ಕುಮಾರಸ್ವಾಮಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ನಿವೃತ್ತ ಅಧಿಕಾರಿ ರಾಜು, ಜಿಪಿಐಇಆರ್ ತಂಡದ ಸಂಚಾಲಕ ಎಂ.ಪಿ. ಹರಿದತ್ತ, ಕಲಾವಿದರಾದ ಸುಮಮ್, ಚಂದನ್ ಇತರರು ಇದ್ದರು.