ಕುವೆಂಪು ಜನ್ಮ ಸ್ಥಳದಲ್ಲಿ ಮೃತ್ತಿಕೆ ಸಂಗ್ರಹ

02Koppa01 web
Published on

ಕೊಪ್ಪ: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಸರ್ಕಾರ ಹಮ್ಮಿಕೊಂಡಿರುವ ಮೃತ್ತಿಕೆ ಸಂಗ್ರಹ ರಥ ಬುಧವಾರ ಕುವೆಂಪು ಜನ್ಮಸ್ಥಳ ಹಿರೇಕೊಡಿಗೆ, ಹರಿಹರಪುರ ಮಠ ಸೇರಿದಂತೆ ವಿವಿಧೆಡೆ ಮೃತ್ತಿಕೆ ಸಂಗ್ರಹಿಸಲಾಯಿತು.

ಹರಿಹರಪುರ ಮಠದಲ್ಲಿ ಪೂಜೆ ಸಲ್ಲಿಸಿ ಮೃತ್ತಿಕೆ ಸಂಗ್ರಹಿಸಿ ಶಂಕರ ವೃತ್ತದಿಂದ ಹರಿಹರಪುರ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಹಿರೇಕೊಡಿಗೆಗೆ ತೆರಳಿದ ರಥ ಮೃತ್ತಿಕೆ ಸಂಗ್ರಹಿಸಿತು. ನಂತರ ಕೊಪ್ಪದ ಕುವೆಂಪು ವೃತ್ತದಿಂದ ಮೆರವಣಿಗೆ ಸಾಗಿ ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಸ್ ನಿಲ್ದಾಣದವರೆಗೆ ನಾಸಿಕ್ ಬ್ಯಾಂಡ್, ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ತೆರಳಿ ನಾರ್ವೆ ಮೂಲಕ ಜಯಪುರಕ್ಕೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net