ಕುಳ್ಳೂರು ಗ್ರಾಮದಿಂದ ಬೂದಿಪಡಗಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಕಲ್ಪಿಸಲು ಗಿರಿಜನರ ಒತ್ತಾಯ

IMG-20241213-WA0060
Published on

ಚಾಮರಾಜನಗರ: ಕಾಡಂಚಿನ ಗ್ರಾಮ ಕುಳ್ಳೂರು ಹಾಗೂ ಬೂದಿಪಡಗ ಗ್ರಾಮಗಳಿಗೆ ಶನಿವಾರ ಮತ್ತು ಭಾನುವಾರ ಸರ್ಕಾರಿ ಬಸ್ಸು ಸೌಲಭ್ಯವಿಲ್ಲದೆ ಗಿರಿಜನರು ಕಾಡುಪ್ರಾಣಿಗಳ ಭಯದಲ್ಲೇ ಐದು ಕಿಲೋಮೀಟರ್ ರಸ್ತೆಯಲ್ಲಿ ನಡೆದುಹೋಗುವ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಕೆಎಸ್ಆರ್ಟಿಸಿ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಬಸ್ ಸಂಚಾರ ಕಲ್ಪಿಸಿ ಅನುಕೂಲ ಮಾಡಿಕೊಡಬೇಕೆಂದು ಸೋಲಿಗ ಗಿರಿಜನರು ಒತ್ತಾಯಿಸಿದ್ದಾರೆ.

ಮುಖ್ಯ ರಸ್ತೆಯಿಂದ ಕೊಲ್ಲೂರಿಗೆ ತೆರಳಲು ಎರಡು ಕಿಲೋಮೀಟರ್ ಹಾಗೂ ಬೂದಿಪಡಗಕ್ಕೆ ತೆರಳಲು 3 ಕಿ.ಮೀ ದೂರವಿದ್ದು ಏಕಾಏಕಿ ಬಸ್ ಸಂಚಾರ ನಿಲ್ಲಿಸಿರುವುದರಿಂದ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆನೆಗಳು ಹಾಗೂ ಚಿರತೆಯನ್ನು ನೋಡಿ ಜೀವ ಬೆದರಿಕೆ ಉಂಟಾಗಿದೆ, ಈ ಗ್ರಾಮಗಳಿಗೆ ಬಸ್ ಸಂಚಾರ ಕಲ್ಪಿಸಬೇಕೆಂದು ಶಾಸಕ ಸಿ ಪುಟ್ಟರಂಗಶೆಟ್ಟಿ ಹಾಗೂ ಸಚಿವರಾದ ಕೆ ವೆಂಕಟೇಶ್ ಅವರು ಡಿಪೋ ಮ್ಯಾನೇಜರ್ ಅವರಿಗೆ ಸೂಚಿಸಿದ್ದರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ನಮ್ ಸಹಕಾರ ಸಂಘದ ಉಪಾಧ್ಯಕ್ಷ ಶಿವಣ್ಣಗೌಡ ಆರೋಪಿಸಿದ್ದಾರೆ.

ಬೂದಿಪಡಿಗ ಗ್ರಾಮವು ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಒಳಪಡುವುದರಿಂದ ಈ ಗ್ರಾಮಗಳಲ್ಲಿ ಜನರು ನಿರ್ಮಿತಿಯಿಂದ ಸಂಚರಿಸಲು ಬಸ್ಸೌಕರ್ಯ ಅತಗತ್ಯವಾಗಿದೆ ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಹಾಲಮ್ಮ, ಕೊಲ್ಲೂರು ಮಹಾದೇವಮ್ಮ, ಜಡೆ ಮಾದಮ್ಮ, ಸಿದ್ದೇಗೌಡ ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net