ಕುಲಸಚಿವರಾಗಿ ಸೋಮನಾಳ ಅಧಿಕಾರ ಸ್ವೀಕಾರ

Somanala's assumption of power as patriarch
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ ಅಧಿಕಾರ ವಹಿಸಿಕೊಂಡರು. ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಪ್ರೊ. ಬಿ.ಎಸ್. ನಾವಿ ಇದ್ದಾರೆ.
Published on

ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ ಗುರುವಾರ ಅಧಿಕಾರ ವಹಿಸಿಕೊಂಡರು.

ಹಾಲಿ ಕುಲಸಚಿವರಾಗಿದ್ದ ಪ್ರೊ. ಬಿ.ಎಸ್. ನಾವಿ ಅವರು ನೂತನ ಕುಲಸಚಿವರಾಗಿ ನೇಮಕವಾಗಿರುವ ಶಂಕರಗೌಡ ಸೋಮನಾಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಉಪಕುಲಸಚಿವ ಡಾ. ಯು.ಕೆ. ಕುಲಕರ್ಣಿ, ಡಾ. ದೀಪಕ್ ಶಿಂಧೆ, ಸಹಾಯಕ ಕುಲಸಚಿವ ಡಾ. ಪ್ರಕಾಶ ಬಡಿಗೇರ, ಡಾ. ಜಾಯ್ ಹೊಸಕೇರಿ, ಡಾ. ಸವಿತಾ ಹುಲಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net