ಕುರ್ತಕೋಟಿ ಗ್ರಾಪಂ ಎದರು ಪ್ರತಿಭಟನೆ: ವಿಜಯಕುಮಾರ ಸುಂಕದ

31GDG02
Published on

ಗದಗ:
ತಾಲೂಕಿನ ಕುರ್ತಕೋಟಿ ಗ್ರಾಮದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಅಪ್ಪಣ್ಣ ಇನಾಮತಿ ಪಂಚಮಸಾಲಿ ವಿರೊಧಿ ನೀತಿ ಅನುಸರಿಸುತ್ತಿದ್ದಾರೆ. ಗ್ರಾಮದ ಉದ್ಯಾನವನಕ್ಕೆ ಚೆನ್ನಮ್ಮ ಹೆಸರಿಡಲು ವಿರೋಧಿಸಿದ್ದಾರೆ ಎಂದು ಪಂಚಮಸಾಲಿ ಮುಖಂಡ ವಿಜಯಕುಮಾರ ಸುಂಕದ ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗ್ರಾಮದಲ್ಲಿ ಉದ್ಯಾನವನ ನಿಮಿರ್ಸುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಚೆನ್ನಮ್ಮ ಉದ್ಯಾನವನ ಎಂದು ನಾಮಕಾರಣ ಮಾಡಲು ಮನವಿ ಸಲ್ಲಿಸಿದ್ದೇವು. ಈ ಬಗ್ಗೆ ಅಪಣ್ಣ ಇನಾಮತಿ ಪಂಚಮಸಾಲಿ ಮುಖಂಡರ ಜತೆ ಗಲಾಟೆ ಮಾಡಿದರು. ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದರು. ಈ ವಿಷಯ ಶಾಸಕ ಎಚ್.ಕೆ. ಪಾಟೀಲ ಗಮನಕ್ಕೂ ಇದೆ. ಆದರೆ ಸಮಸ್ಯೆ ಬಗೆಹರಿಸುತ್ತಿಲ್ಲ. ಅದಲ್ಲದೇ ಗ್ರಾಪಂ, ಎಪಿಎಂಸಿ ಚುನಾವಣೆಗಳಿಗೆೆ ಪಂಚಮಸಾಲಿಗಳು ಚುನಾವಣೆ ನಿಲ್ಲದಂತೆ ಕ್ಷೇತ್ರದಲ್ಲಿ ಅಪ್ಪಣ್ಣ ಇನಾಮತಿ ಭಯ ಹುಟ್ಟಿಸಿದ್ದಾರೆ. ಸಹಚರರ ಮೂಲಕ ಗುಂಡಾ ವರ್ತನೆ ತೋರುತ್ತಿದ್ದಾರೆ. ಮನೆಯ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಸಮಾಜ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ಸಿನ ವಿರುದ್ಧ ತಾಲೂಕು, ಜಿಲ್ಲಾ ಸಮುದಾಯ ಮುಖಂಡರ ಜತೆ ಚರ್ಚಸಿ ಕುರ್ತಕೋಟಿ ಗ್ರಾಪಂ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸಮಾಜ ಬೆಂಬಲಿಸಬೇಕು ಎಂದು ವಿಜಯಕುಮಾರ ಸುಂಕದ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿರುಪಾಕ್ಷಪ್ಪ ಹೊಸಮನಿ. ಪ್ರಬು ಹೊಸಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net