ಕುರ್ಚಿ ಹೊತ್ತು ಮಳೆಯಿಂದ ಸಂರಕ್ಷಣೆ

h9-Rain Lamington School 2
Published on

ಹುಬ್ಬಳ್ಳಿ: ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನಗರದ ಲ್ಯಾಮಿಂಗ್ಟನ್ ಶಾಲೆ ಆವರಣದಲ್ಲಿ ಮಂಗಳವಾರ ಮಸ್ಟರಿಂಗ್ ಕಾರ್ಯ ನಡೆಯಿತು.

ಈ ವೇಳೆ ಸುರಿದ ಮಳೆಯಿಂದ ಸಂರಕ್ಷಿಸಿಕೊಳ್ಳಲು ಹಲವರು, ಊಟದ ತಟ್ಟೆ ತಲೆಮೇಲೆ ಇಟ್ಟುಕೊಂಡಿದ್ದರೆ, ಕೆಲವರು ಕುರ್ಚಿಗಳನ್ನು ಹೊತ್ತುಕೊಂಡರು.

ಮೇ 10ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಗೆ ತರಬೇತಿ, ಸೂಚನೆ ನೀಡಲಾಯಿತು. ಇದೇ ವೇಳೆ ಸುರಿದ ಮಳೆಯಿಂದ ಹಲವರು ಶಾಲೆಯ ಆವರಣದಿಂದ ಕಟ್ಟಡದತ್ತ ಓಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net