ಕುರುಬ ಸಮಾಜ ಇಬ್ಭಾಗಕ್ಕೆ ಸಂಚು: ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್​ ಅಸಮಾಧಾನ

ba
Published on

ತುಮಕೂರು: ಜಿಲ್ಲೆಯ ಕುರುಬ ಸಮಾಜವನ್ನು ಇಬ್ಭಾಗ ಮಾಡಿ ಕುರುಬರ ಜಾಗೃತಿ ಸಮಾವೇಶದ ಬದಲಾಗಿ ಕಾಂಗ್ರೆಸ್​ ಮುಖಂಡರ ಜಾಗೃತಿ ಸಮಾವೇಶ ಮಾಡಲಾಗಿದೆ ಎಂದು ತೆಂಗುನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್​ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ಎಲ್ಲ ರಾಜಕೀಯ ಮುಖಂಡರು, ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾ ಕುರುಬರ ಜಾಗೃತಿ ಸಮಾವೇಶವನ್ನು ಪಕ್ಷಾತಿತವಾಗಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ರಾಜ್ಯ ಕುರುಬರ ಸಂದಲ್ಲಿನ ಕಾಂಗ್ರೆಸ್​ ಮುಖಂಡರು ಜಿಲ್ಲೆಗೆ ಕಾಲಿಟ್ಟು ನಮ್ಮ ಸಮಾಜವನ್ನೇ ಒಡೆದಿದ್ದಾರೆ ಎಂದು ಆರೋಪಿಸಿದರು.

ಶನಿವಾರ ತುಮಕೂರಲ್ಲಿ ನಡೆದ ಕುರುಬರ ಜಾಗೃತಿ ಸಮಾವೇಶ ಅದು ಕುರುಬರ ಜಾಗೃತಿ ಸಮಾವೇಶವಲ್ಲ. ಕಾಂಗ್ರೆಸ್​ ಜಾಗೃತಿ ಸಮಾವೇಶ. ಕೆಲವು ಕಾಂಗ್ರೆಸ್​ ಏಜೆಂಟರು ಸಮಾಜದ ಬಂಧುಗಳನ್ನು ಸೇರಿಸುವ ಶಕ್ತಿ ಇಲ್ಲದವರು ಮಾಡಿರುವ ಕಾಂಗ್ರೆಸ್​ ಸಮಾವೇಶವದು. ಕಾಂಗ್ರೆಸ್​ನ ಮೂಲ ಮಂತ್ರವಾದ ಒಡೆದು ಆಳುವ ನೀತಿಯನ್ನು ಮುಂದುವರಿಸಿಕೊಂಡು ಬಂದಿದ್ದು ಸಣ್ಣ ಸಣ್ಣ ಸಮಾಜಗಳನ್ನು ಒಡೆದು ಆಳುವ ಕಾಂಗ್ರೆಸ್​ನ ನೀತಿ ಖಂಡನೀಯ ಎಂದರು.

ಜಿಲ್ಲೆಯಲ್ಲಿ ಕುರುಬ ಸಮುದಾಯ 3ನೇ ಸ್ಥಾನದಲ್ಲಿದೆ. ಕಾಂಗ್ರೆಸ್​ನಿಂದ ಎಷ್ಟು ಜನಕ್ಕೆ ಈವರೆಗೆ ಟಿಕೆಟ್​ ಕೊಟ್ಟಿದ್ದೀರಾ? ನಿಗಮ&ಮಂಡಳಿಗೆ ಎಷ್ಟು ಜನರನ್ನು ನೇಮಿಸಿದ್ದೀರಾ? ಸಮಾವೇಶದಲ್ಲಿ ಕಾಂಗ್ರೆಸ್​ ಮುಖಂಡರು ಬಿಟ್ಟರೆ ಬೇರೆ ಪಕ್ಷದ ಯಾವುದೇ ಮುಖಂಡರಿರಲಿಲ್ಲ. ಸಮಾಜದ ಮುಖಂಡರನ್ನು ಬೇರೆ ಜಾತಿಯ ಮುಖಂಡರು ಹೀಯಾಳಿಸುವಾಗ ಬಾಯಿಮುಚ್ಚಿಕೊಂಡು ಇದ್ದೀರಾ? ಸಮಾಜದಲ್ಲಿ ಜಾಗೃತಿ ಮೂಡಿಸುತ್ತೀರಾ? ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್​, ತುಮಕೂರು ನಗರ ಮಂಡಲದ ಅಧ್ಯಕ್ಷ ಟಿ.ಎಚ್​.ಹನುಮಂತರಾಜು, ಕನಕ ಪತ್ತಿನ ಸಹಕಾರ ಸಂದ ಅಧ್ಯಕ್ಷ ಇಂದ್ರಕುಮಾರ್​, ರಾಜ್ಯ ಪ್ರದೇಶ ಕುರುಬರ ಸಂದ ನಿರ್ದೇಶಕ ಪುಟ್ಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಓಂನಮೋನಾರಾಯಣ್​, ಮಾಜಿ ನಿರ್ದೇಶಕ ಎಂ.ಪಿ.ಕುಮಾರಸ್ವಾಮಿ, ಕಾಳಿದಾಸ ವಿದ್ಯಾವರ್ಧಕ ಸಂದ ಪ್ರಧಾನ ಕಾರ್ಯದರ್ಶಿ ಭೀಮರಾಜು, ನಿರ್ದೇಶಕ ದುಗ್ಗಿವೆಂಕಟೇಶ್​, ನಗರಸಭಾ ಮಾಜಿ ಸದಸ್ಯ ಎಂ.ಪಿ.ರಮೇಶ್​, ತಿಪಟೂರು ನಗರಸಭಾ ಸದಸ್ಯ ಲೋಕೇಶ್​, ಪಾವಗಡ ಪುರಸಭಾ ಸದಸ್ಯ ಶೇಖರ್​ಬಾಬು ಮತ್ತಿತರರು ಹಾಜರಿದ್ದರು.

ಎಸ್ಟಿ ಹೋರಾಟಕ್ಕೆ ಏಕೆ ಬರಲಿಲ್ಲ?

ಸಮಾಜದ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಎಸ್ಟಿ ಹೋರಾಟಕ್ಕೆ ಸಿದ್ದರಾಮಯ್ಯ ಏಕೆ ಬರಲಿಲ್ಲ? ಅವರ ಸರ್ಕಾರ ಇದ್ದಾಗಲೂ ಎಸ್ಟಿಗೆ ಸೇರಿಸಲಿಲ್ಲ. ಈಶ್ವರಪ್ಪ ನಮ್ಮ ಸಮಾಜದ ಸ್ವಾಮೀಜಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ನೀವು ಎಂದಾದರೂ ಸಮಾಜದ ಪರವಾಗಿ ಹೋರಾಟ ಮಾಡಿದ್ದೀರಾ? ಬಿಜೆಪಿ ಕುರುಬರಿಗೆ ಏನೂ ಮಾಡಿಲ್ಲ ಅಂಥ ವ್ಯಂಗ್ಯವಾಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಗಿನೆಲೆ ಪ್ರಾಧಿಕಾರ ರಚಿಸಿ 40 ಕೋಟಿ ಅನುದಾನ ಕೊಡಲಾಗಿದೆ. ಕನಕ ಜಯಂತಿ ಸಹ ೂಷಿಸಲಾಗಿತ್ತು. ನಾಲ್ವರನ್ನು ಮಂತ್ರಿ ಮಾಡಲಾಗಿತ್ತು. ನೀವು ಎಷ್ಟು ಜನಕ್ಕೆ ಮಂತ್ರಿ ಮಾಡಿದ್ದೀರಾ ಎಂದು ಬಿ.ಕೆ.ಮಂಜುನಾಥ್​ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net