ಕುರುಗೋಡು ತಾಲೂಕಿನಲ್ಲಿ ಬಾಳೆ ಬೆಳೆ ಹಾಳು

28 kurugodu 02
Published on

ಕುರುಗೋಡು: ತಾಲೂಕಿನಲ್ಲಿ ಭಾನುವಾರ ಸುರಿದ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಬಾಳೆ ಫಸಲು ನೆಲಕಚ್ಚಿದರೆ, ಭತ್ತದ ಕಾಳು ಮಣ್ಣು ಪಾಲಾಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ದಮ್ಮೂರು ಗ್ರಾಮದಲ್ಲಿ ಪಿ.ನಂದಿನಿ, ಸಿಂಗದೇವನಹಳ್ಳಿ ಗ್ರಾಮದಲ್ಲಿ ಸತ್ಯನಾರಾಯಣ ರೆಡ್ಡಿ, ಸಿಂಧಿಗೇರಿ ಗ್ರಾಮದಲ್ಲಿ ತಿಮ್ಮೇಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲು ಮಳೆ, ಗಾಳಿಗೆ ನೆಲಕಚ್ಚಿದೆ. ಹೊಸ ಯಲ್ಲಾಪುರದಲ್ಲಿ ಮೂಕಪ್ಪ ಅವರ ಗುಡಿಸಲಿನ ಮೇಲೆ ಬೃಹತ್ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಕೆಲವೆಡೆ ವಿದ್ಯುತ್ ಕಂಬ ಬಿದ್ದಿವೆ.

ಸಿದಮ್ಮನಹಳ್ಳಿಯಲ್ಲಿ ಭತ್ತದ ಕಾಳು ಮಣ್ಣುಪಾಲಾಗಿದೆ. ಬೆಳೆ ಹಾನಿಯಾದ ಜಮೀನಿಗೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net