

ಚಿತ್ರದುರ್ಗ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ,ಪ್ರಸಕ್ತ ಸಾಲಿನ ಗಿರಿಜನ ಉಪಯೋಜನೆಯಡಿ ಕುರಿ,ಮೇಕೆ ಘಟಕಕ್ಕಾಗಿ ನೋಂ ದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರಿಂದ ಡಿ.15 ರೊಳಗೆ ಅರ್ಜಿ ಆಹ್ವಾನಿಸಿದೆ. 18ರಿಂದ 60ವರ್ಷ ವಯೋಮಿತಿಯೊಳಗಿನ ಮಹಿಳಾ,ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು. 10 ಸುಧಾರಿತ ಹೆಣ್ಣು ಕುರಿ,ಮೇಕೆ, 1 ಟಗರು ಹಾ ಗೂ ಹೋತಕ್ಕೆ 66 ಸಾವಿರ ಮಂಜೂರು ಮಾಡಲಾಗುತ್ತಿದ್ದು,ಇದರಲ್ಲಿ ಶೇ.90 ಸಹಾಯಧನವಿರುತ್ತದೆ. ಜಿಲ್ಲೆಗೆ 14 ಘಟಕಗಳ ಗುರಿ ಇದೆ. ಹೆ ಚ್ಚಿನ ಮಾಹಿತಿಗೆ ಸಹಕಾರ ಸಂಘ ಅಥವಾ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿ ಸಂಪರ್ಕಿಸ ಬಹುದೆಂದು ಪ್ರಕಟಣೆ ತಿಳಿಸಿದೆ.