ಕುರಿಗಾಹಿಗಳ ಹಿತ ಕಾಪಾಡಲು ಬದ್ಧ

IMG-20231010-WA0248
Published on

ಯಾದಗಿರಿ: ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಕುರಿಗಳು ಸಾವನ್ನಪ್ಪಿದ್ದರೆ, ಕುರಿಗಾಹಿಗಳಿಗೆ ಅಗತ್ಯ ಪರಿಹಾರ ನೀಡಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಗುರುವಾರ ನಗರದ ತಾಲೂಕಿನ ಪಶು ಆಸ್ಪತ್ರೆಯ ಆವರಣದಲ್ಲಿ ಕರ್ನಾಟಕಸಹಕಾರ ಕುರಿ ಮತ್ತು ಮೇಕೆ ಮಹಾಮಂಡಳಿ ಸಹಯೋಗದಲ್ಲಿ ವಲಸೆ ಕುರಿಗಾಹಿಗಳಿಗೆ ಸಂಚಾರಿ ಟೆಂಟ್ ಮತ್ತು ಕಿಟ್ಗಳನ್ನು ವಿತರಿಸಿ ಮಾತನಾಡಿ, ಜಾನುವಾರುಗಳಿಗೆ ಯಾವುದೇ ಕಾಯಿಲೆಗಳು ಬಾರದಂತೆ ಪಶು ಆಸ್ಪತ್ರೆಯಲ್ಲಿ ಲಸಿಕೆಗಳನ್ನು ಉಚಿತವಾಗಿ ಹಾಕಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತಾ ಹೋಗುವ ಕುರಿಗಾರರಿಗೆ ಅನುಕೂಲವಾಗಲೆಂದು ಸರಕಾರ ಈ ಕಿಟ್ಗಳನ್ನು ನೀಡಿದೆ ಎಂದರು.

ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪಶು ಸಂಗೋಪನ ಸಚಿವರ ಜತೆ ಮಾತನಾಡುತ್ತೇನೆ. ತಾಲೂಕಿನ ಮಂಡಗಳ್ಳಿಯಲ್ಲಿ ಹಳೆ ವೈಷ್ಯಮ್ಯಕ್ಕಾಗಿ ಕುರಿಗಳನ್ನು ಸಾಯಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕುರಿ ಕಳೆದುಕೊಂಡ ರೈತನಿಗೆ ಸರಕಾರದಿಂದ ಪರಿಹಾರ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net