ಕುರಿಗಾಹಿ ಅರಣ್ಯ ನಿಷೇಧ ಪ್ರವೇಶ ಹಿಂಪಡೆಯಿರಿ

28 ydg 05
Published on

ಯಾದಗಿರಿ: ಅರಣ್ಯ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರು ಮೇಯಿಸಲು ಹಾಕಿರುವ ನಿರ್ಬಂಧ ಮತ್ತು ನಿಷೇಧವನ್ನು ಕೂಡಲೇ ಹಿಂಪಡೆದು ಕುರಿಗಾಹಿಗಳ ಹಿತರP್ಷÀಣಾ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕುರುಬ ಸಂಘದ ಜಿ¯್ಲÁಧ್ಯP್ಷÀ ಮಲ್ಲಣ್ಣ ಐಕೂರ ನೇತೃತ್ವದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸೋಮವಾರ ಜಿ¯್ಲÁಧಿಕಾರಿಗಳ ಕಚೇರಿ ಆವರಣದಲ್ಲಿ ಮನವಿಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಮಾಜದ ಮುಖಂಡರು, ಗ್ರಾಮೀಣ ಭಾಗದ ಕುರಿ ಮತ್ತು ದನಗಾಯಿಗಳು ಅರಣ್ಯ ಪ್ರದೇಶದ ಮೇಲೆ ಅವಲಂಬಿತರಾಗಿದ್ದು, ನಿಷೇಧ ಕಾಯ್ದೆ ಬಡ ಕುರಿ ಮತ್ತು ದನಗಾಯಿಗಳ ಪಾಲಿಗೆ ಮಾರಕವಾಗಿದೆ. ಇಲಾಖೆಯವರಿಂದ ಕುರಿ ಗಾಯಗಳ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯ ಮಾಡಲಾಗುತ್ತಿದೆ. ಕಾರಣ ಇದನ್ನು ತಪ್ಪಿಸಿ ಅಲ್ಲಿ ಮೇಯಿಸಲು ಅನುವು ಮಾಡಿಕೊಡಬೇಕು. ಕುರಿಗಾಯಿಗಳಿಗೆ ಬಂದೂಕ್ ಲೈಸೆನ್ಸ್ ನೀಡಬೇಕು, ಈ ಕುರಿತು ಆಗಸ್ಟ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ ಕುರಿಗಾರರ ಹಿತರP್ಷÀಣಾ ಕಾಯ್ದೆ ಜಾರಿಗೊಳಿÄವಂತೆ ಮನವಿ ಮಾಡಿಕೊಂಡರು.

ಮನವಿಗೆ ಸ್ಪಂದಿಸಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರಗಳ ಮೇಯಿಸುವ ಕುರಿತು ಹಾಕಲಾಗಿರುವ ನಿರ್ಬಂಧ ಆದೇಶ ಹಿಂಪಡೆದು ಕುರಿ ದನಗಾಯಿಗಳಿಗೆ ಅರಣ್ಯ ಪ್ರದೇಶದಲ್ಲಿ ಮೇಯಿಸಲು ಅನುಕೂಲ ಮಾಡಿಕೊಡುವುದರ ಜತೆಗೆ ಕುರಿಗಾಯಿಗಳ ಪ್ರಮುಖ ಬೇಡಿಕೆ ಈಡೇರಿಸುವುದಾಗಿ ಭರವಸೆ ನಿಡಿದರು.

ಮುಖಂಡರಾದ ಸಿದ್ದಣ್ಣಗೌಡ ಕಾಡಂನೊರ, ವಿಶ್ವನಾಥï ನೀಲಹಳ್ಳಿ, ಈಶ್ವರಪ್ಪ ಮಾಸ್ಟರ, ಶಿವುಮಾಂತು ಚಂದಾಪುರ, ಚಂದ್ರಶೇಖರ್ ವಾರದ, ಸಾಯಬಣ್ಣ ಕೆಂಗೂರಿ, ಮಲ್ಲಯ್ಯ ಮಗ್ಗ, ಬಾಸುಮಿಯ ನಾಯ್ಕೋಡಿ,ಭೀಮು ಪೂಜಾರಿ, ಶಿವಕುಮಾರ ಕೊಂಕಲ, ಬಸಲಿಂಗಪ್ಪ ನಾಯಕï, ವೆಂಕಟೇಶ್ ಹೊನ್ನಪ್ಪ ಹಾಲಗೇರಾ, ಮಹೇಶ ಕ್ಯಾತನಾಳ, ಭೀಮು ಬಬಲಾದಿ, ಬೀರಲಿಂಗ, ನಿಂಗಣ್ಣ ಜಡಿ,ಬಸನಗೌಡ ಮಾಲಿ ಪಾಟೀಲï, ಭೀಮಣ್ಣ ಹಂಚಿನಾಳ, ಗಡ್ಡೆಲಿಂಗ ಬೆಂಡೆಬೆAಬಳಿ, ಮಾಳಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net