ಕುರಿಗಾರರ ಕುಟುಂಬಕ್ಕೆ ತಲಾ ೨೦ ಕುರಿ ಒಂದು ಮೇಕೆ ಕೊಡುಗೆ; ಸಿಎಂ ಘೋಷಣೆ

Published on

ಹಾವೇರಿ: ಕುರಿಗಾರರ ಕುಟುಂಬಕ್ಕೆ ತಲಾ ೨೦ ಕುರಿ ಒಂದು ಮೇಕೆ ಕೊಡುವ ನೂತನ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದರು.

ಬ್ಯಾಡಗಿಯಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇದು ಆಗಲ್ಲ ಎನ್ನುತ್ತಿದ್ದಾರೆ. ೩೫೪ ಕೋಟಿ ರೂ. ಇದಕ್ಕಾಗಿ ಮೀಸಲು ಇಡಲಾಗಿದೆ. ಇದನ್ನು ಜಾರಿಗೊಳಿಸಲಾಗುವುದು ಶತಸಿದ್ಧ ಎಂದರು‌.

ಲಂಬಾಣಿ ಜನರಿಗೆ ಪ್ರಥಮ ಬಾರಿಗೆ ರಾಜ್ಯದ ಎಲ್ಲ ತಾಂಡಾಗಳ ಮನೆಗಳಿಗೆ ಹಕ್ಕು ಪತ್ರ ಕೊಡಲಾಗುತ್ತಿದೆ. ೫೦ ಸಾವಿರ ತಾಂಡಾಗಳು ಇದರ ಪ್ರಯೋಜನ ಪಡೆದಿವೆ ಎಂದರು.

ಕಾಂಗ್ರೆಸ್ ಐದು ವರ್ಷ ಆಡಳಿತ ರಾಜ್ಯವನ್ನು ಅಧೋಗತಿಗೆ ತಂದಿತ್ತು. ಅವರ ಎಲ್ಲ ಭಾಗ್ಯಗಳು ದೌರ್ಭಾಗ್ಯ ಆಗಿತ್ತು. ಅವರ ಸರ್ಕಾರ ಕಿತ್ತೆಸೆದ ಮೇಲೆ‌ ಈಗ ಭಾರತ ಜೋಡೋ ಎಂಬ ನಾಟಕ ಶುರು ಮಾಡಿದ್ದಾರೆ.
ರಾಹುಲ್ ವಿಫಲ ನಾಯಕ ಅವರು ಎಲ್ಲಿ ಹೋಗ್ತಾರೆ ಅಲ್ಲಿ ವಿಫಲ‌ ಖಚಿತ.
ಅವರು ಇಲ್ಲಿ ಪಾದಯಾತ್ರೆ ಮಾಡಿದ್ದಾರೆ ಇಲ್ಲಿ ಕಾಂಗ್ರೆಸ್ ಹುಲ್ಲು ಕೂಡ ಹುಟ್ಟಲ್ಲ.

ಜಾರಕಿಹೊಳಿ ಹಿಂದು ಎಂಬ ಶಬ್ದ ಹೊಲಸು ಅಂತಾರೆ. ಅವರ ಶಾಲಾ ಸರ್ಟಿಫಿಕೇಟ್ ನೋಡಲಿ. ಅದರಲ್ಲಿ ಹಿಂದು ಎಂದಿದೆ. ಈಗ ಓಟ್ ಬ್ಯಾಂಕ್ ತುಷ್ಟೀಕರಣದ ಸಲುವಾಗಿ ಈ ಮಾತು ಹೇಳುತ್ತಿದ್ದಾರೆ. ನಿಮ್ಮ ವಿಚಾರ ಹೊಲಸಿನಿಂದ ಕೂಡಿದೆ. ನಿಮ್ಮಂಥ ಪಕ್ಷ ಅಧಿಕಾರಕ್ಕೆ ಬರಲು ಯೋಗ್ಯವಲ್ಲ ಎಂದು ಕುಟುಕಿದರು.

ಸಿದ್ದರಾಮಯ್ಯ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ. ರಾಹುಲ್ ಇದಕ್ಕೆ ನಿಮ್ಮ ಬೆಂಬಲ ಇದೆಯಾ? ಇಲ್ಲದಿದ್ದರೆ ಪಕ್ಷದಿಂದ ತೆಗೆಯಿರಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net