

ಬಾಗಲಕೋಟೆ: ರಾತ್ರಿ ಕುರಿಗಳನ್ನು ಕಳ್ಳತನ ಮಾಡಲು ಹೋಗಿದ್ದವರನ್ನು ಹಿಡಿಯಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಹಳಗೇರಿ ಟೋಲ್ ನಾಕಾ ಬಳಿ ಭಾನುವಾರ ರಾತ್ರಿ ನಡೆದಿದೆ.
ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಶರಣಪ್ಪ ಜಮ್ಮನಕಟ್ಟಿ(೨೩) ಕೊಲೆಯಾಗಿರುವ ಯುವಕ ಎಂದು ಗುರುತಿಸಲಾಗಿದೆ. ಕಲ್ಲು ಹಾಗೂ ಕೊಡಲಿಯಿಂದ ಆರೋಪಿಗಳು ಹತ್ಯೆ ಮಾಡಿದ್ದಾರೆ. ಇದಕ್ಕೆ ಸಂಬAಽಸಿದAತೆ ಮೂವರು ಆರೋಪಿಗಳನ್ನು ಕೆರೂರ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
ಭಾನುವಾರ ರಾತ್ರಿ ಯಾಕೂಬ್ ಅಗಸಿಮನಿ, ಸಲ್ಮಾನ್ ಕರೆಮನ್ಸೂರ, ಸಚಿನ್ ಭಜಂತ್ರಿ ಎನ್ನುವವರು ಶರಣಪ್ಪ ಜುಮ್ಮನಕಟ್ಟಿ ಅವರ ಕುರಿಗಳನ್ನು ಕಳ್ಳತನ ಮಾಡಲು ಹೋಗಿದ್ದರು. ಕಳ್ಳರನ್ನು ಗಮನಿಸಿದ ಶರಣಪ್ಪ, ಮೂವರು ಕಳ್ಳರನ್ನು ಹಿಡಿಯಲು ಹೋಗಿದ್ದಾನೆ. ಮೂವರು ಪೈಕಿ ಯಾಕೂಬ್ ಎನ್ನುವವನನ್ನು ಶರಣಪ್ಪ ಹಿಡಿದುಕೊಂಡಿದ್ದಾನೆ. ಇದರಿಂದ ಗಾಬರಿ ಬಿದ್ದ ಉಳಿದ ಇಬ್ಬರು ಆರೋಪಿಗಳು ಶರಣಪ್ಪನ ಮೇಲೆ ಕಲ್ಲು ಹಾಗೂ ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ಸ್ಥಳದಿಂದ ಕಾಲ್ಕಿತ್ತಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಬಳಿಕ ಕೆರೂರ ಠಾಣೆ ಪೊಲೀಸರು ರಾತ್ರಿಯೇ ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಸಹ ಅದೇ ಉಗಲವಾಟ ಗ್ರಾಮದವರು ಇದ್ದಾರೆ.