ಕುರಿ ಕಳ್ಳತನ ಮಾಡಿದ್ದವನ ಬಂಧನ

08 HNAUR 1
ಕುರಿ ಕಳ್ಳತನ ಮಾಡಿದ್ದವನನ್ನು ರಾಮಾಪುರ ಪೊಲೀಸರು ಬಂಧಿಸಿರುವುದು. ಸೈಯದ್ ಮುಷರಫ್, ನಾಗೇಂದ್ರ, ರಮೇಶ್ ಹಾಗೂ ಲಿಯಾಖತ್ ಆಲಿಖಾನ್ ಇದ್ದರು.
Published on

ಹನೂರು: ತಾಲೂಕಿನಲ್ಲಿ ರಾಮಾಪುರ ಗ್ರಾಮದಲ್ಲಿ ಕುರಿ ಕಳ್ಳತನ ಮಾಡಿದ್ದವನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ರಾಮಾಪುರ ಗ್ರಾಮದ ಇಂದಿರಾ ಕಾಲನಿ ನಿವಾಸಿ ವಿಶ್ವ (27) ಬಂಧಿತ ಅರೋಪಿ. ಕುರಿ ಕಳ್ಳತನ ಕುರಿತು ರಾಮಾಪುರ ಪೊಲೀಸ್ ಠಾಣೆಗೆ ಕೆಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಸಂಜೆ 5 ಗಂಟೆ ವೇಳೆಯಲ್ಲಿ ಮಹದೇಶ್ವರ ದೇವಸ್ಥಾನದ ಬಳಿ ಈತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವನ್ನು ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ನಡೆಸಲಾಗಿ, ಕುರಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. 2 ಕುರಿ ಹಾಗೂ ಬೈಕ್ ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸೈಯದ್ ಮುಷರಫ್, ನಾಗೇಂದ್ರ, ರಮೇಶ್ ಹಾಗೂ ಲಿಯಾಖತ್ ಆಲಿಖಾನ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net