ಕುಮಾರ್ ಬಂಗಾರಪ್ಪ ಜಾತ್ಯತೀತ ನಾಯಕ

28sor1
ಸೊರಬದಲ್ಲಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕುಮಾರ ಬಂಗಾರಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ಡಿ.ಉಮೇಶ್, ಗುರುಕುಮಾರ್ ಪಾಟೀಲ್, ಪ್ರಭು ಮೇಸ್ತ್ರಿ, ಮಲ್ಲಿಕಾರ್ಜುನ, ಕುಸುಮಾ ಇತರರಿದ್ದರು.
Published on

ಸೊರಬ: ಮಾಜಿ ಸಚಿವ ಎಸ್.ಕುಮಾರ್ ಬಂಗಾರಪ್ಪ ಅವರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮೂಲಕ ದೂರದೃಷ್ಟಿಯ ಚಿಂತನೆ ಹೊಂದಿರುವ ಜಾತ್ಯತೀತ ಜನನಾಯಕ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ.ಉಮೇಶ್ ಹೇಳಿದರು.

ಕುಮಾರ್ ಬಂಗಾರಪ್ಪ ಅವರ 62ನೇ ವರ್ಷದ ಜನ್ಮದಿನದ ಅಂಗವಾಗಿ ಪಟ್ಟಣದ ರಂಗನಾಥ ಸ್ವಾಮಿ ದೇವಾಲಯಲ್ಲಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಬಂಗಾರಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಶಾಸಕರಾಗಿ, ಸಚಿವರಾಗಿ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಿರುವ ಇವರು ಸಮಗ್ರ ಚಿಂತನೆ ಹೊಂದಿರುವ ಆದರ್ಶದ ನಾಯಕ. ತಾಲೂಕಿನ ಹಲವು ಭಾಗಗಳಲ್ಲಿ ಸುಸಜ್ಜಿತ ರಸ್ತೆ, ದೇವಾಲಯ, ಆರೋಗ್ಯ, ಶಿಕ್ಷಣ, ಅಡಳಿತ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಶ್ರಮವಹಿಸಿದ್ದರು ಎಂದರು.

ಜನರ ಅನುಕೂಲಕ್ಕಾಗಿ ಪುರಸಭೆ, ಕಂದಾಯ ಹಾಗೂ ತಾಲೂಕು ಪಂಚಾಯಿತಿ ಒಂದೇ ಸೂರಿನಡಿ ಬರುವಂತೆ 100 ಕೋಟಿ ರೂ. ವೆಚ್ಚದಲ್ಲಿ ವಿಸ್ತಾರ ಸೌಧ ನಿರ್ಮಾಣದ ಗುರಿ ಹೊಂದಿದ್ದರು. ಅದರಲ್ಲಿ 30 ಕೋಟಿ ರೂ. ಅನುದಾನವನ್ನು ಆಗಲೇ ಬಿಡುಗಡೆಗೊಳಿಸಿದ್ದರು. ನಾರಾಯಣಗುರು ವಸತಿ ಶಾಲೆ, ಮೂಗೂರು ಏತ ನೀರಾವರಿ ಹೀಗೆ ಹತ್ತು ಹಲವು ಯೋಜನೆಗಳನ್ನು ತಾಲೂಕಿಗೆ ತರುವಲ್ಲಿ ಶ್ರಮಿಸಿದ್ದಾರೆ ಎಂದರು.

ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಗುರುಕುಮಾರ್ ಪಾಟೀಲ್ ಮಾತನಾಡಿ, ಕುಮಾರ್ ಬಂಗಾರಪ್ಪ ಅವರು ತಾಲೂಕಿನ ಸರ್ವರ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದರು. ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ, ಶಿವನಗೌಡ, ವಕೀಲ ಸೋಮಪ್ಪ, ಗುರುಮೂರ್ತಿ, ಕುಸುಮಾ, ಅಶೋಕ ಶೇಟ್, ಪ್ರಭಾಕರ ರಾಯ್ಕರ್, ಕಿರಣ್‌ಕುಮಾರ್, ಕೆ.ಜಿ.ಬಸವರಾಜ್, ಟೇಕಪ್ಪ, ಅಭಿಷೇಕ್, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net