

ಚಿತ್ರದುರ್ಗ: ಕುಮಾರರಾಮನ ವ್ಯಕ್ತಿತ್ವ ರೋಮಾಂಚನವಾದುದು,ಕನ್ನಡಕ್ಕೊಬ್ಬ ಗಂಡುಗಲಿಯಿದ್ದರೆ ಅದು ಕುಮಾರರಾಮನೆ ಎಂದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ‌್ಯ ಡಾ.ಎಂ.ಕೆ.ದುರುಗಪ್ಪ ಹೇಳಿದರು. ಚಿತ್ರದುರ್ಗ ಇತಿಹಾಸ ಕೂಟ ಇತಿ ಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ನಗರದ ಐಎಂಎಂ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ 52ನೇ ಉಪನ್ಯಾಸದಲ್ಲಿ‘ಕರ್ನಾಟಕದಲ್ಲಿ ಕುಮಾರರಾಮನ ಪಂಥ : ಚಾರಿತ್ರಿಕ ವಿಶ್ಲೇಷಣೆ’ ಕುರಿತು ಅವರು ಮಾತನಾಡಿದರು.
ಶರಣಾಗತಿ,ಕಪ್ಪಕಾಣಿಕೆ ಕೊಡುವುದನ್ನು ದಿಟ್ಟವಾಗಿ ವಿರೋಧಿಸುತ್ತಿದ್ದ ಕುಮಾರರಾಮ,ಹುಟ್ಟು-ಸಾವು ಎರಡಲ್ಲೂ ಸಾರ್ಥಕವಾಗಿ ಬದುಕಿ ದೈ ವತ್ವಕ್ಕೇರಿದ ಅಪರೂಪದ ಧೀರ ಎಂದು ಬಣ್ಣಿಸಿದರು.
ಕುಮಾರರಾಮ ಪಠ್ಯದಲ್ಲಿ ಮೆರೆಯದಿದ್ದರೇನಂತೆ?, ಜನಪದರ ನಾಲಿಗೆ ಮೇಲೆ ಕುಣಿದಾಡುತ್ತಿದ್ದಾನೆ. ಕಮ್ಮಟದುರ್ಗ ಅರಸರಲ್ಲಿ ಪ್ರಖ್ಯಾತ ಗ ಳಿಸಿದ ಕುಮಾರರಾಮ ಜನಮಾನಸದಲ್ಲಿ ಈಗಲೂ ಉಳಿದುಕೊಂಡಿದ್ದಾನೆ. 19ನೇ ಶತಮಾನದವರೆಗೂ ಕಮ್ಮಟದುರ್ಗ ಎಲ್ಲಿದೆ ಅನ್ನುವುದೇ ಗೊತ್ತಿರಲಿಲ್ಲ.ಈಚೆಗೆ ಈ ಕುರಿತು ಅನೇಕ ಸಂಶೋಧಕರು ಗಮನ ಸೆಳೆದಿದ್ದಾರೆ. ಹುಲ್ಲೂರು ಶ್ರೀನಿವಾಸಜೋಯಿಸರು ಕುಮಾರರಾಮನ ಕುರಿ ತು ಆಳವಾಗಿ ಅಧ್ಯಯನ ಮಾಡಿದ್ದಾರೆ ಎಂದರು.
ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಡಾ.ಲಕ್ಷ್ಮಣ್‌ತೆಲಗಾವಿ,ರೇಣು ಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್,ವಕೀಲ ಎಚ್.ಎಂ.ಎಸ್.ನಾಯಕ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಡಿ. ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ,ಪ್ರೊ.ಟಿ.ವಿ.ಸುರೇಶ್‌ಗುಪ್ತ, ಕೆಆರ್‌ಜೆ ರಾಜ್‌ಕುಮಾರ್, ಕೃಷ್ಣಮೂರ್ತಿ,ಪರಶುರಾಂ, ಸಿ.ಟಿ. ಚಿದಾನಂದಮೂರ್ತಿ,ರಾಜಮದಕರಿನಾಯಕ, ರಂಗಸ್ವಾಮಿ ಇತರರು ಇದ್ದರು.