ಕುಮಾರಣ್ಣನ ಕಾರ್ಯಕ್ರಮ ಯಶಸ್ವಿಗೊಳಿಸಿ

16ydg01
Published on

ಯಾದಗಿರಿ: ನಾಡಿನ ಸಮಗ್ರ ಅಭಿವೃದ್ಧಿಗಾಗಿ ರೈತರ, ಮಹಿಳೆಯರ, ಯುವಕರ ಹಾಗೂ ಶೋಷಿತ ವರ್ಗದ ಸಮಗ್ರ ಕಲ್ಯಾಣ ಕೇವಲ ಜೆಡಿಎಸ್ನಿಂದ ಮಾತ್ರ ಎಂದು ಪಕ್ಷದ ಗುರುಮಠಕಲ್ ಅಭ್ಯಥರ್ಿ ಶರಣಗೌಡ ಕಂದಕೂರ ತಿಳಿಸಿದರು.

ಬುಧವಾರ ನಗರದ ಹೊರವಲಯದಲ್ಲಿನ ಸಪ್ತಗಿರಿ ಕಲ್ಯಾಣ ಪಂಟಪದಲ್ಲಿ ಪಂಚರತ್ನ ರಥ ಯಾತ್ರೆ ಆಗನದ ಹಿನ್ನೆಲೆಯಲ್ಲಿ ಕರೆದಿದ್ದ ಪದಾಕಾರಿಗಳ ಸಭೆಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಾ.23 ರಂದು ಸಂಜೆ 4 ಗಂಟೆಗೆ ಮತಕ್ಷೇತ್ರದ ಯರಗೋಳ ಗ್ರಾಮಕ್ಕೆ ರಥಯಾತ್ರೆ ಆಗಮಿಸಲಿದೆ. ಈ ಅಭೂತಪೂರ್ವ ಕಾರ್ಯಕ್ರಮ ಯಶಸ್ಸಿಗೆ ನಾವು,ನೀವೆಲ್ಲರೂ ಶ್ರಮಿಸಬೇಕಿದೆ ಎಂದರು.

ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅಂದು ಕಲಬುರಗಿುಂದ ಯರಗೋಳ ಗ್ರಾಮಕ್ಕೆ ಬರಲಿದ್ದಾರೆ. ನಾಲವಾರ ಕ್ರಾಸ್ ಬಳಿ ಸುಮಾರು 1 ಸಾವಿರ ಬೈಕ್ರ್ಯಾಲಿ ಮೂಲಕ ಭವ್ಯ ಸ್ವಾಗತ ಕೋರಲು ಉದ್ದೇಶಿಸಲಾಗಿದೆ. ರ್ಯಾಲಿಯಲ್ಲಿ ಸಾವಿರಾರು ಯುವಕರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಎಲ್ಲ ಘಟಕದ ಪದಾಕಾರಿಗಳು, ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ಜೆಡಿಎಸ್ ಪಂಚರತ್ನ ಯೋಜನೆಯು ನಾಡಿನ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನ ಹೊಂದಿದೆ. ಕುಮಾರಣ್ಣನವರು ಮುಖ್ಯಮಂತ್ರಿಯಾದರೆ, ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಿದ್ದಾರೆ ಎಂದರು.

ಸಭೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಉದ್ಘಾಟಿಸಿದರು. ಇದಕ್ಕೂ ಮುನ್ನ ರಥಯಾತ್ರೆಯ ಮಾಹಿತಿಯನ್ನು ಸಾರುವ ಪ್ರಚಾರ ವಾಹನಕ್ಕೆ ಶಾಸಕರು, ಜಿಲ್ಲಾಧ್ಯಕ್ಷರು ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net