ಕುಮಾರಣ್ಣ ಅಪ್ಪಣೆ ಕೊಟ್ಟರೆ ದುರ್ಗದಿಂದ ಸ್ಪರ್ಧೆ,ಆಚಾರ್

achar-02
Published on

ಕುಮಾರಣ್ಣ ಅಪ್ಪಣೆ ಕೊಟ್ಟರೆ ದುರ್ಗದಿಂದ ಸ್ಪರ್ಧೆ,ಆಚಾರ್

ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಈಗ ತೆನೆ ಹೊರಲು ಸಜ್ಜಾಗಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದು,ಏ.19ರಂದು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿ ಪಕ್ಷದ ವರಿಷ್ಠರು ಅಪ್ಪಣೆ ಕೊಟ್ಟರೆ ಚಿತ್ರದುರ್ಗ ದಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.

19ರಂದು ದುರ್ಗದಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿ ಕರಪತ್ರವನ್ನು ಹಂಚಿದ್ದೀರುವ ಕುರಿತಂತೆ ಕರಪತ್ರವನ್ನು ನಾನು ನೋಡಿಲ್ಲವೆಂ ಬ ಹಾರಿಕೆ ಉತ್ತರ ನೀಡಿದರು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಕನಿಷ್ಠ 2 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಎರಡೂ ಜಿಲ್ಲೆಗಳ ಉಸ್ತುವಾರಿಯನ್ನು ಕುಮಾರಣ್ಣ ನನಗೆ ವಹಿಸಿದ್ದಾರೆ ಎಂದರು.

ಚಿತ್ರದುರ್ಗದ ಪಕ್ಷದ ಜಿಲ್ಲಾ ಕಚೇರಿಯಲ್ಲಾದ ಸಭೆಯಲ್ಲಿ ಜಿಲ್ಲೆ ಮತ್ತು ರಾಜ್ಯದ ಪಕ್ಷದ ಪ್ರಮುಖರು ಕಾಣುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಜಿ ಲ್ಲಾಧ್ಯಕ್ಷ ಡಿ.ಯಶೋಧರ ಶನಿವಾರ ಬೆಂಗಳೂರಲ್ಲಿ ನನ್ನೊಂದಿಗೆ ಇದ್ದರು. ಎಲ್ಲ ಪ್ರಮುಖರು ನಮ್ಮೊಂದಿಗೆ ಇದ್ದಾರೆ. ನನ್ನ ಹಾಗೂ ಮಾಜಿ ಸಿ ಎಂ ಸಿದ್ದರಾಮಯ್ಯ ಅವರ ಸಂಬಂಧ ಚೆನ್ನಾಗಿದೆ. ಆದರೆ ಸಂಬಂಧ,ಪಕ್ಷ ನಿಷ್ಠೆ ಬೇರೆ ಬೇರೆ.

ದುರ್ಗ ಅಥವಾ ಮತ್ತೆ ಬೇರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೂ ಅಲ್ಲಿ ಕಣಕ್ಕೆ ಇಳಿಯುವೆ. ಚಿತ್ರದುರ್ಗದಲ್ಲಿ ಸದ್ಯದಲ್ಲೇ ಕಾಂಗ್ರೆಸ್ ಕಾಣೆ ಯಾಗಲಿದೆ ಎಂದು ಆಚಾರ್,ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಚಾರ ಮಾಡುವೆ ಆದರೆ ಹೊಳಲ್ಕೆರೆ ಕ್ಷೇತ್ರದಲ್ಲಿ ಆಂಜನೇಯ ಅವರ ವಿರುದ್ಧವಾಗಿ ಪ್ರಚಾರ ನಡೆಸಲಾರೆ.ಚಿತ್ರದುರ್ಗದಲ್ಲಿ ಅಜ್ಜ-ಮೊಮ್ಮಗನ ಫೈಟ್ ನಡೆಯಲಿದೆ. ನಾನು ಜೀವನದಲ್ಲಿ ಸೋಲು ಕಂಡಿಲ್ಲ. ಕನಿಷ್ಠ 35 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಹೇಳಿದರು. ಗೂಳಿಹಟ್ಟಿ ಡಿ.ಶೇಖರ್ ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net