ಕುಮಾರ ದೇಸಾಯಿ ಅಧ್ಯಕ್ಷ, ಅಶೋಕ ಲೆಂಕೆಣ್ಣವರ ಉಪಾಧ್ಯಕ್ಷ

nandi sugars
ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕುಮಾರ ಚಂದ್ರಕಾಮತ ದೇಸಾಯಿ (ಜೈನಾಪುರ) ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪಾಂಡಪ್ಪ ಲೆಂಕೆಣ್ಣವರ (ಗಿರಗಾಂವ) ಆಯ್ಕೆಯಾದ ನಂತರ ಸಿಹಿ ಹಂಚಿ ಸಂಭ್ರಮಿಸಲಾಯಿತು.
Published on

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕುಮಾರ ಚಂದ್ರಕಾಮತ ದೇಸಾಯಿ (ಜೈನಾಪುರ) ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪಾಂಡಪ್ಪ ಲೆಂಕೆಣ್ಣವರ (ಗಿರಗಾಂವ) ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ ದೇಸಾಯಿ ಹನ್ನೊಂದು ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಎಚ್.ಎಸ್. ಕೋರಡ್ಡಿ ಎಂಟು ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಪಾಂಡಪ್ಪ ಲೆಂಕಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯನ್ನು ರಿಟರ್ನಿಂಗ್ ಆಫೀಸರ್ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ವಿಜಯಪುರ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ನಿರ್ವಹಿಸಿದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಕುಮಾರ ದೇಸಾಯಿ ಹಿರಿಯರು, ರೈತರು ಹಾಗೂ ಷೇರು ಸದಸ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಎಲ್ಲರ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ನಿರ್ದೇಶಕರಾದ ಶಶಿಕಾಂತಗೌಡ ಭೀಮನಗೌಡ ಪಾಟೀಲ (ಶಿರಬೂರ), ಅದೃಷಪ್ಪ ವಾಸಣ್ಣ ದೇಸಾಯಿ, ಈರನಗೌಡ ಬಸನಗೌಡ ನ್ಯಾಮಗೌಡರ, ಗೌಡಪ್ಪ ಕೃಷ್ಣಪ್ಪ ಕೋಣಪ್ಪನವರ, ರಮೇಶ ಪಾಂಡಪ್ಪ ಜಕರಡ್ಡಿ, ಬಸನಗೌಡ ದುಂಡಪ್ಪಗೌಡ ಪಾಟೀಲ, ಮಲ್ಲಪ್ಪ ಭೀಮಪ್ಪ ಮಾದರ, ಸೋಮನಗೌಡ ರಾಮನಗೌಡ ಪಾಟೀಲ, ಹಣಮಂತ ಭೀಮಪ್ಪ ಕೊಣ್ಣೂರ, ಸಂಜಯಗೌಡ ಗೌಡಪ್ಪಗೌಡ ಪಾಟೀಲ, ರತ್ನವ್ವ ಪಾಂಡಪ್ಪ ಬಿರಾದಾರ, ಲಕ್ಷ್ಮೀಬಾಯಿ ಪಾಂಡುಸಾಹುಕಾರ ದೊಡಮನಿ, ಶರಶ್ಚಂದ್ರ (ಕುಮಾರ) ತಿಮ್ಮನಗೌಡ ಪಾಟೀಲ, ಗುರಲಿಂಗಪ್ಪ ದುಂಡಪ್ಪ ಅಂಗಡಿ, ಸತ್ಯಜೀತ ಶಿವಾನಂದ ಪಾಟೀಲ, ಶ್ರೀನಿವಾಸ ಕೋಣಪ್ಪ ಊರ್ಫ್ ಹನುಮಪ್ಪ ನಿಡೋಣಿ ಚುಣಾವಣೆಯಲ್ಲಿ ಪಾಲ್ಗೊಂಡಿದ್ದರು.

ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು, ಸುತ್ತಲಿನ ಗ್ರಾಮಗಳ ರೈತರು, ಷೇರು ಸದಸ್ಯರು ಕಾರ್ಖಾನೆ ಆವರಣದಲ್ಲಿ ಸಿಹಿ ಹಂಚಿ ವಿಜಯೋತ್ಸೋವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net