ಕುಬಟೂರು ಕೆರೆಗೆ ಕುಮಾರ್ ಬಂಗಾರಪ್ಪ ಬಾಗಿನ ಅರ್ಪಣೆ

SOR WEB
Published on

ಸೊರಬ: ತಾಲೂಕಿನ ಕುಬಟೂರು ಗ್ರಾಮದ ದೊಡ್ಡಕೆರೆಗೆ ಶಾಸಕ ಕುಮಾರ ಬಂಗಾರಪ್ಪ ಮಂಗಳವಾರ ಬಾಗಿನ ಸಲ್ಲಿಸಿದರು.

ಗ್ರಾಮಸ್ಥರೊಂದಿಗೆ ಗ್ರಾಮದ ದ್ಯಾಮವ್ವ ದೇವಿಗೆ ಪೂಜೆ ಸಲ್ಲಿಸಿ ವಾದ್ಯ ಮೇಳಗಳೊಂದಿಗೆ ಕೆರೆಗೆ ತೆರಳಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ನಿರಂತರ ಬರಗಾಲದಿಂದ ನೀರಿಲ್ಲದೆ ಬೀಕೋ ಎನ್ನುತ್ತಿದ್ದ ಕೆರೆಗೆ ಕಳೆದರಡು ವರ್ಷದಿಂದ ಉತ್ತಮ ಮಳೆಯಾಗಿದ್ದರಿಂದ ಜೀವಕಳೆ ಬಂದಿದೆ. ಕೆರೆಗಳು ತುಂಬಿದರೆ ಜಮೀನುಗಳಿಗೆ ನೀರುಣಿಸಲು, ಜನ, ಜಾನುವಾರುಗಳಿಗೂ ಅನುಕೂಲವಾಗುತ್ತದೆ. ಕೆರಗೆಳ ಒತ್ತುವರಿ ಆಗದಂತೆ ತಾಲೂಕು ಆಡಳಿತ ನಿಗಾವಹಿಸಲಿದೆ ಎಂದರು.

ಪಾಲಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಪ್ರಶಾಂತ, ಮಲ್ಲಿಕಾರ್ಜುನ, ಶಿವಕುಮಾರ, ಚನ್ನಬಸಪ್ಪ, ರಾಜು ಬಡೆಗೇರ್, ಅಭಿಷೇಕ್, ಅರುಣ್, ಮಹೇಶ್, ಶಿವನಗೌಡ್ರು, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net