ಕುಬಟೂರಿನಲ್ಲಿ ಶುಂಠಿ ಗೋದಾಮಿಗೆ ಬೆಂಕಿ

24sor3
ಕುಬಟೂರು ಗ್ರಾಮದ ಗೋದಾಮಿನಲ್ಲಿದ್ದ ಒಣಶುಂಠಿ ಸುಟ್ಟು ಹೋಗಿರುವುದು.
Published on

ಸೊರಬ: ತಾಲೂಕಿನ ಆನವಟ್ಟಿ ಹೋಬಳಿಯ ಕುಬಟೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಶುಂಠಿ ಗೋದಾಮಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇಬ್ರಾಹಿಂ ಸಾಬ್ ಎಂಬುವವರ ಮನೆಯ ಹಿಂಭಾಗದಲ್ಲಿದ್ದ ಶುಂಠಿ ಗೋದಾಮಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು 70 ಕ್ವಿಂಟಾಲ್ ಒಣ ಶುಂಠಿಯಲ್ಲಿ 10 ಕ್ವಿಂಟಾಲ್‌ನಷ್ಟು ಬೆಂಕಿಗೆ ಆಹುತಿಯಾಗಿದೆ. ಗೋದಾಮಿಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net