ಕುನ್ನಾಳ ಪ್ರಾಥಮಿಕ ಶಾಲೆ ಸಮಗ್ರ ವೀರಾಗ್ರಣಿ

6
Published on

ರಾಮದುರ್ಗ: ಪ್ರಸಕ್ತ ಸಾಲಿನ ಹುಲಕುಂದ&ಹಿರೇಕೊಪ್ಪ ಕೆ.ಎಸ್​.ವಲಯಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕುನ್ನಾಳ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಾಲಕಿಯರ ಹಾಗೂ ಬಾಲಕರ ವಿಭಾಗದ ಗುಂಪು ಹಾಗೂ ವೈಯಕ್ತಿಕ ಕ್ರೀಡೆಗಳಲ್ಲಿ ಸಾಧನೆ ಮಾಡುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬಾಲಕರ ಗುಂಪು ವಿಭಾಗದಲ್ಲಿ ವಾಲಿಬಾಲ್​ ಪ್ರಥಮ, ವೈಯಕ್ತಿಕ ವಿಭಾಗದಲ್ಲಿ 600 ಮೀಟರ್​ ಓಟದಲ್ಲಿ ಹಣಮಂತ ಅಳ್ಳಿ ಪ್ರಥಮ, ಹರೀಶ ನಾಡಗೌಡ್ರ ತೃತೀಯ, ಗುಂಡು ಎಸೆತದಲ್ಲಿ ರಾಹುಲ್​ ಕೋಳಿ ಪ್ರಥಮ, ಮನೋಜ ಗಾಣಿಗೇರ ತತೀಯ, ಉದ್ದ ಜಿಗಿತದಲ್ಲಿ ಹಣಮಂತ ಅಳ್ಳಿ ಪ್ರಥಮ, ಶಾಂತಾನಂದ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ಗುಂಪು ಆಟವಾದ ಖೋ&ಖೋದಲ್ಲಿ ಪ್ರಥಮ, ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 100 ಹಾಗೂ 200 ಮೀಟರ್​ ಓಟದಲ್ಲಿ ಅಲ್ಪಿಯಾ ನಾಯ್ಕ ಪ್ರಥಮ, 200 ಮೀಟರ್​ ಓಟದಲ್ಲಿ ಅಪ್ಸಾನಾ ತಹಸೀಲ್ದಾರ್​ ದ್ವೀತಿಯ, 400 ಮೀಟರ್​ ಓಟದಲ್ಲಿ ಸರಸ್ವತಿ ಜಟ್ಟನ್ನವರ ಪ್ರಥಮ, 600 ಮೀಟರ್​ ಓಟದಲ್ಲಿ ಭಾಗ್ಯಾ ಅಲಕನವರ ಪ್ರಥಮ, ಮೇಘಾ ಕಮತಗಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. 8ನೇ ತರಗತಿ ವಿಭಾಗದಲ್ಲಿ 200 ಮೀಟರ್​ ಓಟದಲ್ಲಿ ಅತಾ ಅಳ್ಳಿಗಿಡದ ಪ್ರಥಮ, 400 ಮೀಟರ್​ ಓಟದಲ್ಲಿ ಶಾಲಿನಿ ಕಮತಗಿ ಪ್ರಥಮ, ಚಕ್ರ ಎಸೆತದಲ್ಲಿ ಭಾಗ್ಯ ಹುದ್ದಾರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net