ಕುಣಿಗಲ್​ನಲ್ಲಿ ಲಸಿಕೆ ಪಡೆದ ಮತ್ತೊಂದು ಮಗು ಸಾವು

ಕುಣಿಗಲ್​ನಲ್ಲಿ ಲಸಿಕೆ ಪಡೆದ ಮತ್ತೊಂದು ಮಗು ಸಾವು
Published on

ಮೂರು ದಿನಗಳ ಅಂತರದಲ್ಲಿ 2 ನವಜಾತ ಶಿಶು ಮೃತ, ಆಸ್ಪತ್ರೆಗೆ ಇಲಾಖೆ ಅಧಿಕಾರಿಗಳ ತಂಡ ಭೇಟಿ,ಆತಂಕದಲ್ಲಿ ಪಾಲಕರು

ಕುಣಿಗಲ್​: ತಾಲೂಕಿನ ಭಕ್ತರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ "ಪೆಂಟಾ' ಚುಚ್ಚುಮದ್ದು ಪಡೆದ ಎರಡೂವರೆ ತಿಂಗಳ ನವಜಾತ ಶಿಶು ಮೃತಪಟ್ಟ ಟನೆ ಬೆನ್ನಲ್ಲೇ ಮತ್ತೊಂದು ಮಗು ಅಸುನೀಗಿದ್ದು, ಪಾಲಕರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕಿನಲ್ಲಿ ಮೂರು ದಿನಗಳ ಅಂತರದಲ್ಲಿ ವ್ಯಾಕ್ಸಿನ್​ ಪಡೆದ ಎರಡು ನವಜಾತು ಶಿಶುಗಳು ಮೃತಪಟ್ಟಿರುವುದು ಲಸಿಕೆ ಬಗ್ಗೆಯೇ ಅನುಮಾನ ತರಿಸಿದೆ.

ಏನಿದು ಘಟನೆ: ಭಕ್ತರಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ಗುರುವಾರ (ಜ.2) ಒಟ್ಟು ಐದು ಮಕ್ಕಳಿಗೆ "ಪೆಂಟಾ' ಚುಚ್ಚುಮದ್ದು ನೀಡಲಾಗಿತ್ತು. ಈ ಪೈಕಿ ಶುಕ್ರವಾರ ತಾಲೂಕಿನ ಸಿಂಗೋನಹಳ್ಳಿಯ ಚೆತ್ರಾ ಹಾಗೂ ಮುರಳಿ ದಂಪತಿ ಎರಡೂವರೆ ತಿಂಗಳ ದತ್​ ಮೃತಪಟ್ಟಿತ್ತು. ಜ.2ರಂದೇ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಕುಣಿಗಲ್​ನ ಹೊಸ ಬಡಾವಣೆ ವಿನೋದ್​ ಮತ್ತು ರಂಜಿತಾ ದಂಪತಿಯ ಎರಡು ತಿಂಗಳ ಹೆಣ್ಣು ಮಗು ಯಶಿಕಾಗೆ ಪೆಂಟಾ ಲಸಿಕೆ ಹಾಕಿಸಲಾಗಿತ್ತು. ಆದರೆ, ಶುಕ್ರವಾರ ರಾತ್ರಿ ಮಗು ಇದ್ದಕ್ಕಿಂದಂತೆ ಮೃತಪಟ್ಟಿದೆ.

ಎರಡು ಪ್ರಕರಣ ವರದಿಯಾದ ಬೆನ್ನಲ್ಲೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ರಾಜ್ಯ ನೋಡಲ್​ ಅಧಿಕಾರಿ ಡಾ.ಸುದೀರ್​ ನಾಯಕ್​, ಡಬ್ಲ್ಯುಎಚ್​ಒ ಸರ್ವೇಲೆನ್ಸ್​ ಅಧಿಕಾರಿ ಡಾ. ಸುಧೀರ್​ನಾಯಕ್​, ಜಿಲ್ಲಾ ನೋಡಲ್​ ಅಧಿಕಾರಿ ಡಾ.ಮೋಹನ್​, ತಾಲೂಕು ವೆದ್ಯಾಧಿಕಾರಿ ಡಾ.ಮರಿಯಪ್ಪ ಅವರ ತಂಡ ಶನಿವಾರ ಎರಡು ಆಸ್ಪತ್ರೆಗಳಿಗೆ ಭೇಡಿ ನೀಡಿ ಪರಿಶೀಲಿಸಿ ಲಸಿಕೆ ಮಾದರಿ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

ಏನಿದು ಪೆಂಟಾ ಲಸಿಕೆ

ಪೆಂಟಾ ಲಸಿಕೆ ಐದು ರೋಗ ತಡೆಗಟ್ಟುವಲ್ಲಿ ನೆರವಾಗಿಲಿದೆ. ಆದರೆ, ಲಸಿಕೆ ಮರಣಕ್ಕೆ ಕಾರಣವಾಗಿರುವದು ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಶುಕ್ರವಾರ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ಸ್ಥಳಿಯ ಇಬ್ಬರು ಮಕ್ಕಳ ತಜ್ಙನರ ಮೇರೆಗೆ ಮಗವನ್ನು ಅದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ಮಗು ಮೃತಪಟ್ಟಿತು. ಕುಣಿಗಲ್​ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಶನಿವಾರ ಮಗುವಿನ ಅಂತ್ಯಕ್ರಿಯೆ ಮಾಡಲಾಗಿದೆ. ತಾಲೂಕಿನಲ್ಲಿ ಎರಡು ಹಸು ಕೂಸುಗಳ ಸಾವಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಸಾರ್ವಜನಿಕವಾಗಿ ಚರ್ಚಗೆ ಗ್ರಾಸವಾಗಿದೆ. ಜತೆಗೆ ವೈದ್ಯರೂ ಆದ ಶಾಸಕ ಡಾ.ರಂಗನಾಥ್​ ೇತ್ರದಲ್ಲಿ ಜನತೆಯ ಆರೋಗ್ಯ ಕಾಪಾಡುವ ವೈದ್ಯರತಂಡವನ್ನು ನೇಮಕ ಮಾಡಿಕೊಳ್ಳುವಲ್ಲಿ ವಿಲರಾಗಿದ್ದಾರೆ ಎಂಬ ಚರ್ಚೆ ಸಾರ್ವಜನಿಕರ ವಲಯದಲ್ಲಿ ಜೋರಾಗಿದೆ.

ಕುಣಿಗಲ್​ ತಾಲೂಕಿನ ಎರಡೂ ಪ್ರಕರಣಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ. ಅಧಿಕಾರಿಗಳ ಇಂತಹ ಕರ್ತವ್ಯ ಲೋಪ ಹೆಚ್ಚುತ್ತಿರುವ ಬಗ್ಗೆ ಆಯೋಗ ಕಳವಳ ವ್ಯಕ್ತಪಡಿಸುತ್ತದೆ. ವಿಚಾರಣೆಯ ನಂತರ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕೆಗೊಳ್ಳಲು ಸರ್ಕಾರಕ್ಕೆ ಶಿಾರಸು ಮಾಡಲಾಗುವುದು.

|  ಡಾ.ಕೆ.ಟಿ ತಿಪ್ಪೇಸ್ವಾಮಿ ಮಕ್ಕಳ ರಣಾ ಆಯೋಗದ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net