ಕುಣಿಗಲ್​, ಮಾಗಡಿಗೆ ಹೇಮೆ ನೀರು

26
Published on

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಕುಣಿಗಲ್​: ಹೇಮಾವತಿ ನೀರಿನ ವಿಚಾರವಾಗಿ ಸರ್ಕಾರ ಕುಣಿಗಲ್​, ಮಾಗಡಿ ತಾಲೂಕಿಗೆ ಅನ್ಯಾಯ ಮಾಡುವುದಿಲ್ಲ. ಆದಷ್ಟು ಬೇಗ ನೀರಿನ ಕಾಮಗಾರಿ ಸಮಸ್ಯೆ ಬಗೆಹರಿಸಿ ನೀರನ್ನು ಹರಿಸುತ್ತೇವೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕುಣಿಗಲ್​ ಮತ್ತು ಮಾಗಡಿ ಎರಡೂ ತಾಲೂಕಿನ ಗಡಿಯಲ್ಲಿರುವ ವಿಜಯನಗರ ಸಾಮ್ರಾಜ್ಯದ ಹಕ್ಕ&ಬುಕ್ಕರು ಸ್ಥಾಪಿಸಿದ ಬುಕ್ಕಸಾಗರದ ಅನಂತಶಯನ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ನಂತರ ದಾಸೋಹ ಭವನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೂವರೆ ಲಕ್ಕೂ ಅಧಿಕ ದೇವಸ್ಥಾನಗಳು ಇವೆ. 34,000 ದೇವಸ್ಥಾನಗಳು ಮುಜರಾಯಿ ಇಲಾಖೆಯ ಅಧೀನದಲ್ಲಿದ್ದು, ಅಗತ್ಯವಿರುವ ದೇವಸ್ಥಾನಗಳಿಗೆ ಸ್ಥಳಿಯ ಜನರ ಬೇಡಿಕೆ ಆಧರಿಸಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದೆ. ಬೆಂಗಳೂರು&ಕುಣಿಗಲ್​ ಹೆದ್ದಾರಿಯಲ್ಲಿ ಬರುವ ಅಂಚೇಪಾಳ್ಯ, ತಿಪ್ಪಸಂದ್ರ ಹ್ಯಾಂಡ್​ಪೋಸ್ಟ್​ನಲ್ಲಿ ರಾಜ್ಯ ಸಾರಿಗೆ ಬಸ್​ ನಿಲುಗಡೆಗೆ ಸ್ಥಳಿಯರು ಮನವಿ ನೀಡಿದ್ದು ಪರಿಶೀಲಿಸಿ ಕ್ರಮ ಕೆಗೊಳ್ಳಲಾಗುವುದು ಎಂದರು.

ಶಾಸಕ ಡಾ.ರಂಗನಾಥ್​ ಮಾತನಾಡಿ, ಕುಣಿಗಲ್​ ತಾಲೂಕಿಗೆ 17 ಹೊಸ ಬಸ್​ ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಅವರು 7 ಬಸ್​ಗಳನ್ನು ಕೊಡಲು ಒಪ್ಪಿದ್ದಾರೆ. ಜತೆಗೆ ಬೆಂಗಳೂರು, ಕುಣಿಗಲ್​ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ಬಸ್​ ನಿಲುಗಡೆಗೆ ಮನವಿ ಮಾಡಿದ್ದೇವೆ ಎಂದರು.

ಬೆಟ್ಟಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರು ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ಆಚಾರ ವಿಚಾರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ದೇವಸ್ಥಾನದ ಕಾರ್ಯದರ್ಶಿ ಗಂಗಶಾನಯ್ಯ ಮಾತನಾಡಿ, ದೇವಸ್ಥಾನದ ಅಭಿವದ್ಧಿಗೆ ಸರ್ಕಾರ ಶ್ರಮಿಸಿದ್ದು ಸಂತಸ ತಂದಿದೆ. ದೇವಸ್ಥಾನದ ಪ್ರಾಂಗಣದಲ್ಲಿಯೇ ಭಕ್ತಾದಿಗಳಿಗೆ ದಾಸೋಹ ನೆರವೇರಿಸುತ್ತಿದ್ದೆವು ಈಗ ಹೊಸ ದಾಸೋಹ ಕಟ್ಟಡ ಏಕಕಾಲದಲ್ಲಿ ಸಾವಿರಾರು ಜನರು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಕುಣಿಗಲ್​, ಮಾಗಡಿ ತಾಲೂಕುಗಳ ಜನರು ಭಾಗವಹಿಸಿ ಭಾವೆಕ್ಯತೆಯಿಂದ ಅನಂತಶಯನ ಸ್ವಾಮಿಯ ರಥೋತ್ಸವ ನೆರವೇರಿಸಿದರು. ಸಾರ್ವಜನಿಕರು ಭಕ್ತಿಭಾವದಿಂದ ರಥೋತ್ಸವವನ್ನು ನೆರವೇರಿಸಿ ಬಾಳೆಹಣ್ಣು ದವನವನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಅನಂತಶಯನ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಧುನಿಕರು ನೆರವೇರಿಸಿ ಸಕಲ ವೇದಶಾಸ್ತ್ರಗಳ ಮಂತ್ರೂಷಗಳನ್ನು ಮೊಳಗಿಸಿದರು. ಚಿಕ್ಕಬಳ್ಳಾಪುರದ ಮಂಗಳನಾಥ ಸ್ವಾಮೀಜಿ, ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಪುಟ್ಟಸ್ವಾಮಿ, ಗಂಗಶಾನಯ್ಯ, ರಾಜ್​ಕುಮಾರ್​, ರಾಮಕಷ್ಣ, ಅನಂತರಾಮು, ರಾಜಣ್ಣ, ಅನಂದಾನಯ್ಯ, ನಿವತ್ತ ಮುಖ್ಯಶಿಕರಾದ ಪಿ.ನಾಗರಾಜು, ಸಂಪತ್​ ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net