ಕುಣಿಗಲ್​ ಜನರ ರಣೆಗೆ ಬದ್ಧ

Published on

ಕುಣಿಗಲ್​: ಹೇಮಾವತಿ ನೀರಿನ ವಿಚಾರದಲ್ಲಿ ಕುಣಿಗಲ್​ ತಾಲೂಕಿಗೆ ಆರಂಭದಿಂದಲೂ ವಂಚನೆಯಾಗಿದೆ. ನಮ್ಮ ಪಾಲಿನ 3.01 ಟಿಎಂಸಿ ನೀರನ್ನು ಪಡೆಯಲು ಲಿಂಕ್​ ಕೆನಾಲ್​ ಯೋಜನೆ ಅನಿವಾರ್ಯ. ಇದಕ್ಕಾಗಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಶಾಸಕ ಡಾ. ಎಚ್​.ಡಿ.ರಂಗನಾಥ್​ ತಿಳಿಸಿದ್ದಾರೆ.

ಹೇಮಾವತಿ ಹೋರಾಟದ ತವರು ಕುಣಿಗಲ್​ ತಾಲೂಕು. ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಟ್ಟ ಮೂಲ ಲಾನುಭವಿಗಳಾಗಿದ್ದರೂ ತಾಲೂಕು ತನ್ನ ಪಾಲಿನ ನೀರು ಪಡೆಯಲು ಸಾಧ್ಯವಾಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಮಗೆ ಹರಿದಿರುವುದು ಕೇವಲ 300& 500 ಎಂಸಿಎ್​ ನೀರು ಮಾತ್ರ ಎಂದು ಬೇಸರ ಹೊರ ಹಾಕಿದ್ದಾರೆ.

ಈ ಅನ್ಯಾಯ ಸರಿಪಡಿಸಿ 2018ರಲ್ಲಿ ಲಿಂಕ್​ ಕೆನಾಲ್​ ಕಾಮಗಾರಿ ಕೆಗೆತ್ತಿಕೊಳ್ಳಲಾತು. ಹಲವಾರು ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಈ ಎಲ್ಲ ಅಡೆ&ತಡೆ ಮೀರಿ ಕಾಮಗಾರಿ ಪ್ರಾರಂಭವಾಗಿ ಕುಣಿಗಲ್​ ಜನತೆಯ ದಶಕಗಳ ಕನಸು ನನಸಾಗುವ ಹೊತ್ತಿನಲ್ಲಿ ಈ ಯೋಜನೆ ವಿರೋಧಿಸಿ ಹೋರಾಟ

ನಡೆಯುತ್ತಿರುವುದು ವಿಷಾದನೀಯ ಸಂಗತಿ' ಎಂದು ಹೇಳಿದ್ದಾರೆ.

ಲಿಂಕ್​ ಕೆನಾಲ್​ ಪೆಪ್​ಲೆನ್​ ಕಾಮಗಾರಿಯನ್ನು ಕೇವಲ ಕುಣಿಗಲ್​ ತಾಲೂಕಿಗೆ ಹಂಚಿಕೆಯಾಗಿರುವ 388 ಕ್ಯೂಸೆಕ್ಸ್​ ನೀರು ಹರಿಸಲು ಸಾಧ್ಯವಾಗುವಂತೆ ಮಾತ್ರ ವಿನ್ಯಾಸಗೊಳಿಸಲಾಗಿದೆ. ಕುಣಿಗಲ್​ ತಾಲೂಕಿನ ಪಾಲಿನ ನೀರನ್ನು ಪಡೆಯುವುದು ಈ ಯೋಜನೆಯ ಉದ್ದೇಶವಾಗಿದೆ. ಕೆಲವು ಪಟ್ಟಭದ್ರರು ತಮ್ಮ ರಾಜಕೀಯ ಸ್ವಹಿತಾಸಕ್ತಿಗಳಿಗೆ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಾ, ಜಿಲ್ಲೆಯ ಜನತೆ ಮಧ್ಯೆ ದ್ವೇಷದ ಬೀಜ ಬಿತ್ತಲು ಮುಂದಾಗಿದ್ದಾರೆ. ಜಿಲ್ಲೆಯ ರೈತರು ಮತ್ತು ಸಂ&ಸಂಸ್ಥೆಗಳು ಇಂತಹ ರಾಜಕೀಯ ಸ್ವಹಿತಾಸಕ್ತಿಯ ಅಪಪ್ರಚಾರಗಳಿಗೆ ಕಿವಿಗೊಡದೆ ಕುಣಿಗಲ್​ ತಾಲೂಕಿನ ಜನತೆಗೆ ತಮ್ಮ ಪಾಲಿನ ನೀರನ್ನು ಪಡೆಯಲು ಸಹಕರಿಸಬೇಕು' ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net