ಕುಡುಮಂಗಳೂರು ಶಾಲೆಯಲ್ಲಿ ಸರ್ ಎಂವಿ ಜನ್ಮದಿನ

15Kush002
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್‌ಎಸ್‌ಎಸ್ ಘಟಕ ಹಾಗೂ ವಿಜ್ಞಾನ ಸಂಘದಿಂದ ಶಾಲೆಯ ಕನ್ನಡ ಭಾಷಾ ಸಂಘ, ಸಮಾಜ ವಿಜ್ಞಾನ ಸಂಘದಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಉದ್ಘಾಟಿಸಿದರು. ಕೆ.ಗೋಪಾಲಕೃಷ್ಣ, ಕೆ.ಗೋಪಾಲಕೃಷ್ಣ ಮೊದಲಾದವರು ಹಾಜರಿದ್ದರು.
Published on

ಕುಶಾಲನಗರ:ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್‌ಎಸ್‌ಎಸ್ ಘಟಕ ಹಾಗೂ ವಿಜ್ಞಾನ ಸಂಘದ ವತಿಯಿಂದ ಕನ್ನಡ ಭಾಷಾ ಸಂಘ, ಸಮಾಜ ವಿಜ್ಞಾನ ಸಂಘದಲ್ಲಿ ಗುರುವಾರ ಭಾರತ ರತ್ನ ಸರ್ ಎಂ .ವಿಶ್ವೇಶ್ವರಯ್ಯ ಅವರ ಜನ್ಮದಿನ ಆಚರಿಸಲಾಯಿತು.

ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ ಹಾಗೂ ಅವರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ, ಅವರ ಆದರ್ಶವನ್ನು ಮೈಗೂಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.
ಇಂಜಿನಿಯರಿಂರ್ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ನೀಡಿರುವ ಗಣನೀಯ ಕೊಡುಗೆಗಳನ್ನು ವೃತ್ತಿಪರವಾಗಿ ಗೌರವಿಸಲು ಭಾರತ ಸರ್ಕಾರ ಅವರ ಜನ್ಮದಿನವನ್ನು ಇಂಜಿನಿಯರ್ಸ್‌ ಡೇ ಎಂದು 1968 ರಲ್ಲಿ ಘೋ ಷಿಸಿದೆ ಎಂದರು.

ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಶಿಕ್ಷಕ ಕೆ.ಗೋಪಾಲಕೃಷ್ಣ ಮಾಹಿತಿ ನೀಡಿದರು. ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್ , ಬಿ.ಡಿ.ರಮ್ಯಾ ಅನ್ಸಿಲಾ ರೇಖಾ, ವೈ.ಎಂ.ಸರಸ್ವತಿ, ಶಾಲಾ ನಾಯಕಿ ಸಂಜನಾ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net